ಬೆಳಗಾವಿ,27: ಮಹಾಂತೇಶ್ ನಗರದ ಡಾ. ಪ.ಗು ಹಳಕಟ್ಟಿ ಭವನದಲ್ಲಿ ಷಷ್ಟಬ್ದಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗಂದಿಗವಾಡದ ರಾಜಗುರು ಪೀಠದ ಪರಂಪರೆಯಲ್ಲಿ ಬಂದಿರುವ ಮೃತ್ಯುಂಜಯ ಹಿರೇಮಠ ಇವರು ವಿವಿಧ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣವು ಬದಲಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಮುಂದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಈ ಸತ್ಕಾರವನ್ನು ನೆರವೇರಿಸಿದವರನ್ನು ನಾನೆಂದಿಗೂ ಮರೆಯಲಾರೆನು ಎಂದು ಹೇಳಿದರು.
ಈ ಸತ್ಕಾರ ಸಮಾರಂಭದಲ್ಲಿ ಅಶೋಕ್ ಉಳ್ಳೆಗಡ್ಡಿ ಸ.ರಾ. ಸುಳಕೂಡೆ, ಎಂ ವಾಯ್ ಮೆಣಸಿನಕಾಯಿ, ಬಿ ಜಿ ಪಾಟೀಲ್ ಶಿಕ್ಷಕ ಮರ್ಲಕ್ಕನವರ್, ಡಾ. ಸುನೀಲ ಪರೀಟ,ಸುಮನ್ ಪರೀಟ್ ಮುಂತಾದವು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಗುರುಗಳಾದ ಮೃತ್ಯುಂಜಯ ಹಿರೇಮಠ ಸಾರ್ಥಕ ಸೇವೆಯನ್ನು ಹಾರ್ದಿಕವಾಗಿ ನೆನಪಿಸಿಕೊಂಡು ಅಭಿನಂದಿಸಲಾಯಿತು. ಈ ಸಮಾರಂಭವು ತನ್ಮಯ ಚಿಂತನ ಚಾವಡಿ, ರಾಮತೀರ್ಥ್ ನಗರ್, ಬೆಳಗಾವಿ ಇವರಿಂದ ಹಮ್ಮಿಕೊಳ್ಳಲಾಗಿತ್ತು.