ರನ್ನ ಬೆಳಗಲಿ: ಜು 06: ಮುಧೋಳ ತಾಲೂಕ ರನ್ನ ಬೆಳಗಲಿಯ ಪಟ್ಟಣದ ಸದಾಶಿವ ನಗರದಲ್ಲಿರುವ ಸಿದ್ದಾರೂಢ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯಮಟ್ಟದ ಅತ್ಯುತ್ತಮ ದೈಹಿಕ ಶಿಕ್ಷಕರು, ಪುನೀತ್ ಪ್ರಶಸ್ತಿ ವಿಜೇತರಾದ ಬಿ.ಬಿ ಕೌಜಲ ಅವರು ಮೂಡನಂಬಿಕೆಗಳು ಮಾನವನ ಆತ್ಮಸ್ಥೈರ್ಯವನ್ನು ಕುಂದಿಸುತ್ತವೆ ಆದ್ದರಿಂದ ಈ ಪವಾಡ ರಹಸ್ಯ ಬಯಲು ಕಾರ್ಯಕ್ರಮವು ಮಹತ್ವವನ್ನು ಪಡೆದಿದೆ. ಬೆಕ್ಕು, ನಾಯಿ, ಖಾಲಿ ನೀರಿನ ಬಿಂದಿಗೆ, ನಾವು ಒಳ್ಳೆಯ ಕಾರ್ಯಕ್ಕೆ ಹೋಗುವಾಗ ಎದುರಿಗೆ ಅಥವಾ ಅಡ್ಡ ಬಂದರೆ,ಮನೆಯ ಮುಂದೆ ನಾಯಿ ಕಾಗೆ ಇವೆಲ್ಲ ಬೊಗಳಿದರೆ, ಅಪಶಕುನ, ಆಪತ್ತು ಕಾದಿದೆ ಎಂದು ತಿಳಿದುಕೊಳ್ಳುವ ಮನುಷ್ಯನ ಬುದ್ದಿಗೆ ಏನು ಹೇಳಬೇಕು, ತಮ್ಮ ಆಹಾರಗಳನ್ನು ಅರಸಿಕೊಂಡು ಈ ಪರಿಸರದಲ್ಲಿ ಓಡಾಡುವ ಪ್ರಾಣಿಗಳು, ಇಂದಿನ ವಿಜ್ಞಾನ ಮುಂದೆ ಇದ್ದ ಯುಗದಲ್ಲಿ ಅವುಗಳ ಬದುಕು ನಮ್ಮ ಹಾಗೆ ಇದೆಯಲ್ಲ ಎಂದು ತಿಳಿಯುವ
ಮನಸ್ಥಿತಿ ನಮ್ಮ ಮಕ್ಕಳಿಂದ ಪಾಲಕರು,ಸಮಾಜ ತಿಳಿದುಕೊಳ್ಳಬೇಕಾಗಿದೆ.
ರೈತ ಭೂಮಿಯನ್ನು ನೇಗಿಲು ಹೊಡೆಯುವ ಸಮಯದಲ್ಲಿ ಪಕ್ಷಿ, ಪ್ರಾಣಿಗಳು ಜೋರಾಗಿ ಕಿರುಚುತ್ತಾವೆ, ಏಕೆಂದರೆ, ಅವುಗಳು ಭೂಮಿಯ ಮೇಲೆ ತಮ್ಮ ಸಂತತಿಯನ್ನು ಹೊಲದಲ್ಲಿರುವ ಮೊಟ್ಟೆ, ಮರಿಗಳ ರಕ್ಷಣೆಗಾಗಿ ಹಾತೊರೆಯುವ ಆತಂಕಕ್ಕೆ ಒಳಗಾಗುತ್ತವೆ.ಅದನ್ನು ಅಪಾರ್ಥ ಮಾಡಿಕೊಳ್ಳಬಾರದು.ಇತ್ತೀಚಿನ ದಿನಗಳಲ್ಲಿ ನಗರವಾಸಿಗಳು ಹೆಚ್ಚು ದುಷ್ಟರ ಮೂಢನಂಬಿಕೆಗೆ ಒಳಗಾಗುತ್ತಾರೆ.ಇಂಥಹ ಪವಾಡಗಳನ್ನು ಹೊರಗೆ ಉದ್ದೇಶವೇ ಪವಾಡ ರಹಸ್ಯದ ಮಹತ್ವ ಎಂದು ತಮ್ಮ ಪವಾಡ ರಹಸ್ಯ ಪ್ರಯೋಗಗಳನ್ನು ನಿಂಬೆಹಣ್ಣು ಮಾಯ ಗೊಂಬೆ ಸೂಜಿ ಚುಚ್ಚುವುದು, ಟೆಂಗಿನಕಾಯಿಯಲ್ಲಿ ಹೂಗಳನ್ನು ಬರಿಸುವದು, ನಿಂಬೆಹಣ್ಣಿನನಲ್ಲಿ ರಕ್ತ ಬರಿಸುವುದು ಇತ್ಯಾದಿ ದೃಶ್ಯಗಳನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ, ರವೀಂದ್ರ.ಕಂಬಾರ ವಹಿಸಿದ್ದರು.ಎಸ್.ಎಸ್. ಉದಪುಡಿ, ಎಂ.ಆರ್. ಕುಲಕರ್ಣಿ,ಪಿ.ಕೆ.ಪವಾರ, ಎಂ. ಎಸ್.ಕಲ್ಯಾಣಿ, ಎಂ.ವಿ. ಹೊಸೂರ, ಎಂ.ಎಸ್. ಮೇಗಾಡಿ, ಶ್ರೀಶೈಲ ಕಾಡದೇವರ, ಅಮಿತ ತಳಗೇರಿ, ಶೇಖರ ಬಾಗೇವಾಡಿ, ರೇಣುಕಾ ಗಾಣಿಗೇರ ಗುರುವೃಂದ ಗುರು, ಮಾತೆಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಬಿ.ಪಿ ಚೋಪಡೆ ಚಿತ್ರಕಲಾ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.