ವಾಷಿಂಗ್ಟನ್, ಏಪ್ರಿಲ್ 1: ಭಾರತ ಮೂಲದ ಅಮೇರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದರು. ಈ ಸಮಯದಲ್ಲಿ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಬಾಹ್ಯಾಕಾಶದಿಂದ ಹಿಮಾಲಯದ ನೋಟ ಅದ್ಭುತವಾಗಿದೆ . ನಾವು ಹಿಮಾಲಯದ ಮೇಲೆ ಹಾದು ಹೋದಾಗಲೆಲ್ಲಾ ಬುಚ್ ವಿಲ್ಮರ್ ಅವುಗಳ ಅದ್ಭುತ ಛಾಯಾಚಿತ್ರಗಳನ್ನು ತೆಗೆದಿದ್ದಾರೆ ಎಂದು ಸುನಿತಾ ವಿಲಯಮ್ಸ್ ಹೇಳಿಕೊಂಡಿದ್ದಾರೆ.
ಭಾರತವು ಒಂದು ಮಹಾನ್ ದೇಶ ಮತ್ತು ಅದ್ಭುತ ಪ್ರಜಾಪ್ರಭುತ್ವವಾಗಿದ್ದು, ಅದು ಬಾಹ್ಯಾಕಾಶದಲ್ಲಿ ತನ್ನ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇದು 2026 ರ ವೇಳೆಗೆ ಗಗನಯಾತ್ರಿಗಳನ್ನು ಕಕ್ಷೆಗೆ ಕಳುಹಿಸಲು ಸಜ್ಜಾಗಿದೆ. ಇದರಲ್ಲಿ ಭಾಗವಾಗುವ ಮೂಲಕ ನಾವು ಭಾರತಕ್ಕೆ ಸಹಾಯ ಮಾಡಲು ಬಯಸುತ್ತೇವೆ. ಶೀಘ್ರ ಭಾರತಕ್ಕೆ ಭೇಟಿ ನೀಡುತ್ತೇನೆ, ಅಲ್ಲಿಯ ಜನರೊಂದಿಗೆ ಸಾಧ್ಯವಾದಷ್ಟು ಅನುಭವವನ್ನು ಹಂಚಿಕೊಳ್ಳುತ್ತೇನೆ ಎಂದು ಸುನಿತಾ ಹೇಳಿದ್ದಾರೆ.