ಈ ಸ್ಪರ್ಧೆಯು ಜನೆವರಿ 18 ರ ಭಾನುವಾರದಂದು ನಗರದ ಬಿ.ಕೆ. ಮಾಡೆಲ್ ಹೈಸ್ಕೂಲ್‌ನಲ್ಲಿ ನಡೆಯಲಿದೆ. ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, 5 ರಿಂದ 7ನೇ ತರಗತಿಯವರೆಗೆ ಮೊದಲ ವಿಭಾಗ ಹಾಗೂ 8 ರಿಂದ 10ನೇ ತರಗತಿಯವರೆಗೆ ಎರಡನೇ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕನ್ನಡ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಪ್ರತಿ ಭಾಷೆಯ ಮೊದಲ ಐವರು ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ಶಾಲಾ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಹಾಜರಿರಬೇಕೆಂದು ಸೌಹಾರ್ದ ಸಂಘದ ಅಧ್ಯಕ್ಷರಾದ ಶ್ರೀ ದೇವೇಂದ್ರ ಬನ್ಸಲ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

