ಬಳ್ಳಾರಿ: 16ನಗರದ ಸತ್ಯನಾರಾಯಣ ಪೇಟೆ, ಗಣೇಶ್ ಕಾಲೋನಿ 1 ನೇ ಮುಖ್ಯ ರಸ್ತೆಯ ಶ್ರೀಗುರು ರಾಘವೇಂದ್ರ ನಿಲಯದಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಜ್ಞಾನಶ್ರೀ ಪ್ರತಿಷ್ಠಾನ, ಶ್ರೀ ಪಾಂಡುರಂಗ ಯಾತ್ರಾ ಪ್ರವಾಸ ಆಶ್ರಯದಲ್ಲಿ ಪ್ರತಿ ವರ್ಷ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, 15 ನೇ ವರ್ಷಕ್ಕೆ ಕಾಲಿಟ್ಟಿದೆ.
ಶಿಬಿರದ ಮುಖ್ಯಸ್ಥ, ಕರಾಟೆ ಪಟು ವಿಜಯ ವಿಠಲ ಅವರು ಮಾತನಾಡಿ, ಜ್ಞಾನಶ್ರೀ ಪ್ರತಿಷ್ಠಾನ, ಶ್ರೀ ಪಾಂಡುರಂಗ ಯಾತ್ರಾ ಪ್ರವಾಸ ಆಶ್ರಯದಲ್ಲಿ ಕಳೆದ 14 ವರ್ಷಗಳಿಂದ, ಮಂತ್ರಾಲಯ ಶ್ರೀಮಠದ ಶ್ರೀ ಸುಭುದೇoದ್ರ ತೀರ್ಥ ಸ್ವಾಮೀಜಿ, ಉಡುಪಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಅವರ ಅನುಗ್ರಹದಿಂದ, ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಪ್ರವೇಶ ಶುಲ್ಕ 1ರು. ಮಾತ್ರ ನಿಗದಿಪಡಿಸಲಾಗಿದೆ5 ರಿಂದ 15 ವರ್ಷದ ಒಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ವಿಶೇಷವಾಗಿ 1 ರಿಂದ ಡಿಗ್ರಿ ವರೆಗಿನ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡಲಾಗುವುದು. ಮಕ್ಕಳಿಗೆ ಕರಾಟೆ, ಯೋಗ, ಚಿತ್ರಕಲೆ, ಶ್ಲೋಕ, ಶ್ರೀರಾಮ ನಾಮ ಮಂತ್ರ ಪಠಣ, ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಮಾಡಿಸಲಾಗುವುದು ಎಂದುರು. ಈ ಸಂದರ್ಭದಲ್ಲಿ ಮಕ್ಕಳ ಪಾಲಕರು ಇದ್ದರು.