ಬೆಳಗಾವಿ: ಜನಪದ ಸಾಹಿತ್ಯವು ಹಳ್ಳಿಗಳ ಬದುಕಿನ, ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ಮೂಲವಾಗಿದೆ. ನಮ್ಮ ಹಿರಿಯರು ಕಟ್ಟಿಕೊಟ್ಟಿರುವಂತಹ ಮೂಲ ಜನಪದ ಸಾಹಿತ್ಯ ನಮ್ಮ ಜೀವನಾಡಿ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಪ್ರಮುಖವಾಗಿವೆ. ನಮ್ಮ ಮಕ್ಕಳಿಗೆ ಮೂಲ ಜನಪದದ ಅರಿವೇ ಇಲ್ಲ. ಜನರಿಗೆ ಇಂತಹ ತರಬೇತಿಗಳ ಅವಶ್ಯಕತೆ ಇದೆ. ಜಾನಪದ ಸಾಹಿತ್ಯ ಸಂಸ್ಕೃತಿಯ ಬೇರು, ಅದು ಅನಾದಿಕಾಲ ದಿಂದಲೂ ಬಂದಿದೆ. ಜಾನಪದ ಸಾಹಿತ್ಯದ ರುಚಿ ಉಂಡವರಿಗೆ ಗೊತ್ತು ಅದರ ಆಳ, ಅಗಲ ಹೀಗಾಗಿ ಇತ್ತಿಚೇಗೆ ಕಡಿಮೆಯಾಗತ್ತಿದೆ. ಅದಕ್ಕಾಗಿ ಮಕ್ಕಳಿಗೆ ಕಲಿಸುವ ಪ್ರಯತ್ನ ನಾವು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುಷ್ಪಾ ಮುರಗೋಡ ಮಾತನಾಡಿ , ಜಾನಪದ ಸಾಹಿತ್ಯದದ ವಿವಿಧ ಪ್ರಕಾರಗಳಿಗೆ, ಜಾನಪದ ದೇಶದ ಜೀವಾಳ ಆ ಹಾಡುಗಳಲ್ಲಿ ನಾಡಿನ ಸಂಸ್ಕೃತಿಯೂ ಅಡಗಿದೆ ಎಂದರು.
ಡಾ. ಭವ್ಯ ಅವರ ಯಕ್ಷಗಾನವು ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿ ತಮ್ಮ ಅಭಿನಯ ಹಾಡು ಮಾತುಗಳಿಂದ ಚಕಿತಗೊಳಿಸಿದರು.
ಈ ವೇಳೆ ಹಿರಿಯ ಸಾಹಿತಿಗಳಾದ ಸುನಂದ ಎಮ್ಮಿ ( ಜನಪದ ತ್ರಿಪದಿಗಳಲ್ಲಿ ಸೋದರ ಸಂಬಂಧ) ಉಪನ್ಯಾಸ ನೀಡಿದರು. ಲೇಖಕಿಯರ ಸಂಘ ಉಪಾಧ್ಯಕ್ಷರು ವಾಸಂತಿ ಮೇಳೇದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾನಂದಾ ಪರುಶೆಟ್ಟಿ , ಡಾ. ಪದ್ಮ ಹೊಸಕೋಟೆ , ಸುನಿತಾ ಸೊಲ್ಲಾಪುರೆ, ಪ್ರಭಾ ಪಾಟೀಲ್ , ಜ್ಯೋತಿ ಮಾಳಿ, ಅಕ್ಕಮಹಾದೇವಿ ತಗ್ಗಿ , ದಾನಮ್ಮಾ ಅಂಗಡಿ ,ಸುನಂದಾ ಮುಳೆ, ವಿದ್ಯಾ ರೆಡ್ಡಿ ,ಶೋಭಾ ಬನಶಂಕರಿ , ದ್ರಾಕ್ಷಾಯಿಣಿ ತಾಪಸೆ , ಆಶಾ ಸಂಸುದ್ದಿ, ಗೀತಶ್ರೀ ಬೆಣಚಿನಮರಡಿ, ರುದ್ರಮ್ಮಾ ಯಾಳಗಿ, ಡಾ. ಅನ್ನಪೂರ್ಣ ಹಿರೇಮಠ ನಿರೂಪಿಸಿದರು. ಸುನಿತಾ ನಂದೆನ್ನವರ ವಂದಿಸಿದರು.