ಬಳ್ಳಾರಿ ಏಪ್ರಿಲ್ 03 : ಸುಕೋ ಬ್ಯಾಂಕ್ ರಾಜ್ಯಾದ್ಯಂತ 29 ಶಾಖೆಗಳನ್ನು ಹೊಂದಿದ್ದು ಒಂದು 1314 ಕೋಟಿ ರೂಪಾಯಿಗಳ ಠೇವಣಿಯನ್ನು ಹೊಂದಿದ್ದು 802 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಲಾಗಿದೆ ಅದರಲ್ಲಿ ಕಿರು ಸಾಲ 128 ಕೋಟಿ ರೂಪಾಯಿ ನೀಡಲಾಗಿದೆ ಮತ್ತು ಸಾಲ ವಿತರಣೆಯಲ್ಲಿ ಎಂ ಎಸ್ ಎಂ ಈ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ ಎಂದು ಸುಕೋ ಬ್ಯಾಂಕ್ ಅಧ್ಯಕ್ಷರಾದ ಮೋಹಿತ್ ಮಸ್ಕಿ ತಿಳಿಸಿದರು.
ಅವರು ಇಂದು ಗಾಂಧಿನಗರದ ಸಂಗನಕಲ್ಲು ರಸ್ತೆಯಲ್ಲಿರುವ ಸುಕೋ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಪತ್ರಿತಾಗೋಷ್ಠಿಯನ್ನು ನಡೆಸಿ ಮಾತನಾಡಿ, ಈ ಆರ್ಥಿಕ ವರ್ಷದಲ್ಲಿ 9. 29 ಕೋಟಿ ರೂಪಾಯಿ ಒಟ್ಟು ಲಾಭವನ್ನು ಗಳಿಸಿದ್ದು ತೆರಿಗೆ ನಂತರ 6 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ ಇದರ ಅನ್ವಯ ಶೇರುದಾರರಿಗೆ 0.9 ಪರ್ಸೆಂಟ್ ಲಾಭವನ್ನು ನೀಡಲು ಸಭೆಗೆ ಶಿಫಾರಸು ಮಾಡಲಾಗಿದೆ ಎಂದರು.
ಇನ್ನೊಂದು ಸಂತಸದ ವಿಷಯ ಎಂದರೆ ಸುಕೋ ಬ್ಯಾಂಕ್ ಯುಪಿಐ ಹಣ ಪಾವತಿ ತಂತ್ರಜ್ಞಾನವನ್ನು ಹೊಂದಿದ ರಾಜ್ಯದ ಏಕೈಕ ಸಹಕಾರಿ ಬ್ಯಾಂಕ್ ಆಗಿದೆ ಬ್ಯಾಂಕ್ ಮಟ್ಟಿಗೆ ಇದು ಅತ್ಯಂತ ಹೆಮ್ಮೆಯ ವಿಷಯ ಎಂದು ಮೋಹಿತ್ ಮಸ್ಕಿ ಹರ್ಷವನ್ನು ವ್ಯಕ್ತಪಡಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕರಾದ ಜಿ.ಎಸ್ ರವಿ ಸುಧಾಕರ್, ಕಾರ್ಯದರ್ಶಿ ವೆಂಕಟಶಿವಯ್ಯ ಸೇರಿದಂತೆ ಇತರ ಬ್ಯಾಂಕ್ ಸಿಬ್ಬಂದಿಗಳು ಇದ್ದರು.