ಕಬ್ಬು ಪೂರೈಕೆದಾರರಿಗೆ ಹಾಗೂ ಶೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ: ಅಧ್ಯಕ್ಷ ಪರಪ್ಪ ಸವದಿ

Pratibha Boi
ಕಬ್ಬು ಪೂರೈಕೆದಾರರಿಗೆ ಹಾಗೂ ಶೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ: ಅಧ್ಯಕ್ಷ ಪರಪ್ಪ ಸವದಿ
WhatsApp Group Join Now
Telegram Group Join Now

ಅಥಣಿ: ಸನ್ ೨೦೨೪/೨೫ ಸಾಲಿನ ಕಬ್ಬು ಪೂರೈಕೆ ದಾರರಿಗೆ ಮತ್ತು ಕಾರ್ಖಾನೆಯ ಷೇರುದಾರ ಸದಸ್ಯರಿಗೆ ರಿಯಾಯತಿ ದರ ೨೪ ರೂ.ಗಳ ಪ್ರತಿ ಕೆಜಿ ದರದಲ್ಲಿ ಸಕ್ಕರೆ ವಿತರಣೆಗೆಯನ್ನು ಮಾಡಲಾಗುತ್ತಿದೆ. ಎಲ್ಲ ಕಾರಖಾನೆ ಕಬ್ಬು ಪೂರೈಕೆದಾರರು ಹಾಗೂ ಶೇರುದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕೃಷ್ಣ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ ಮನವಿ ಮಾಡಿದರು
ಅಥಣಿ ತಾಲೂಕಿನ ಸಂಕೋನಹಟ್ಟಿ ಗ್ರಾಮದ ಬಳಿತ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ೨೦೨೪-೨೫ ನೇ ಸಾಲಿನಲ್ಲಿ ಕಾರಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರು ಹಾಗೂ ಶೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣಾ ಕಾರ್ಯಕ್ರಮಕ್ಕೆ ಅಧ್ಯಕ್ಷ ಪರಪ್ಪ ಸವದಿ ಅವರು ರೈರತಿಗೆ ಸಕ್ಕರೆ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕಳೆದ ಸಾಲಿನ ಹಂಗಾಮಿನಲ್ಲಿ ನಮ್ಮ ಕಾರಖಾನೆ ಉತ್ತಮ ಕಾರ್ಯದಕ್ಷತೆಯನ್ನು ಮಾಡಿದ್ದು ಅಲ್ಲದೆ ಸಮರ್ಪಕವಾಗಿ ರೈತರು ಕಬ್ಬು ಪೂರೈಕೆ ಮಾಡುವ ಮೂಲಕ ಕಾರಖಾನೆಯ ಅಭಿವೃದ್ದಿಗೆ ಸಹಕಾರ ಮಾಡಿದ್ದಾರೆ ಎಲ್ಲ ಶೇರುದಾರ ಹಾಗೂ ಕಬ್ಬು ಪೂರೈಕೆದಾರ ನಮ್ಮ ರೈತ ಬಾಂಧವರಿಗೆ ಅಭಿನಂದನೆ ಸಲ್ಲಿಸಿ, ಬರುವ ಹಂಗಾಮಿಗೂ ಹೆಚ್ಚಿನ ರೈತರು ಕಬ್ಬು ಪೂರೈಕೆ ಮಾಡಬೇಕು. ಎಲ್ಲ ರೈತರ ಕಬ್ಬಿಗೆ ಅತಿ ಹೆಚ್ಚು ದರವನ್ನು ನಮ್ಮ ಕಾರಖಾನೆ ನೀಡುತ್ತಿರುವದು ಹೆಮ್ಮೆಯ ಸಂಗತಿ ಎಂದು ಹೇಳಿದರು
ಈ ವೇಳೆ  ವ್ಯವಸ್ಥಾಪಕ ನಿರ್ದೇಕ ಜಿ ಎಮ್ ಪಾಟೀಲ, ಜನರಲ್ ಮ್ಯಾನೇಜರ ಶಂಕರ ಗೋಟಖಿಂಡಿ, ಕಛೇರಿ ಅದಿಕ್ಷಕ ಟಕ್ಕಣ್ಣವರ, ಕಬ್ಬು ಅಭಿವೃದ್ದಿ ಅಧಿಕಾರಿ ಹಣಮಂತ ದರಿಗೌಡರ್, ಸಕ್ಕರೆ ವಿತರಣೆ ನಿರ್ವಾಹಕ ಅಧಿಕಾರಿ ಎಸ್ ಬಿ ವಟ್ಟಣವರ, ಖರಿದಿ ಅಧಿಕಾರಿ ವಿನಾಯಕ ಮನಗೂಳಿ ಸೇರಿದಂತೆ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು

WhatsApp Group Join Now
Telegram Group Join Now
Share This Article