ಕಬ್ಬು ಪೂರೈಸಿದ ರೈತರಿಗೆ  ಜುಲೈ 22 ರಿಂದ  ಬೆಳಗಾಂ ಶುಗರ್ಸ್ ದಿಂದ ಸಕ್ಕರೆ ವಿತರಣೆ

Ravi Talawar
ಕಬ್ಬು ಪೂರೈಸಿದ ರೈತರಿಗೆ  ಜುಲೈ 22 ರಿಂದ  ಬೆಳಗಾಂ ಶುಗರ್ಸ್ ದಿಂದ ಸಕ್ಕರೆ ವಿತರಣೆ
WhatsApp Group Join Now
Telegram Group Join Now
ಬೆಳಗಾವಿ:  ಸನ್ 2023-24ರ ಹಂಗಾಮಿನಲ್ಲಿ ನಮ್ಮ ಕಾರ್ಖಾನೆಗೆ ಕಬ್ಬು ಪೂರೈಸಿದ ಎಲ್ಲ ರೈತ ಬಾಂಧವರಿಗೆ ತಾವು ಪೂರೈಸಿದ ಪ್ರತಿ ಟನ್ ಕಬ್ಬಿಗೆ 500 ಗ್ರಾಂ. (ಅರ್ಧಕೆ.ಜಿ)ಯಂತೆ ಸಕ್ಕರೆಯನ್ನು ಪ್ರತಿ ಕಿ.ಗ್ರಾಂ.ಗೆ ರೂ. 20-ರ ರಿಯಾಯಿತಿ ದರದಲ್ಲಿ ವಿತರಿಸುವ ಕುರಿತು ಕಾರ್ಖಾನೆಯ ಆಡಳಿತ ಮಂಡಳಿಯಿಂದ  ನಿರ್ಧರಿಸಲಾಗಿದೆ.
ಹೀಗಾಗಿ,  ಸನ್‌   2023-24 ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತ ಬಾಂಧವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಕ್ಕರೆಯನ್ನು ಜುಲೈ  22  ರಿಂದ (ಭಾನುವಾರ ರಜೆಯನ್ನು ಹೊರತುಪಡಿಸಿ) ಬೆಳಗಾಂ ಶುಗರ್ಸ ಪ್ರೈಲಿ, ಹುದಲಿ, ಕಾರ್ಖಾನೆಯ ಆವರಣದಲ್ಲಿ ಸಕ್ಕರೆಯನ್ನು ವಿತರಿಸಲಾಗುವುದು.
 ಕಬ್ಬು ಪೂರೈಸಿದ ಎಲ್ಲ ರೈತ ಬಾಂಧವರು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿಯ ಮೂಲಕ ಕಾರ್ಖಾನೆಯ ಆವರಣದ ಸಕ್ಕರೆ ವಿತರಣಾ ಕೇಂದ್ರದಲ್ಲಿ ಕಬ್ಬಿನ ತೂಕದ ಪಾವತಿ, ಗುರುತಿನ ಚೀಟಿ ಹಾಗೂ ಪ್ರತಿನಿಧಿಯಾಗಿದ್ದಲ್ಲಿ ಸಂಬಧಪಟ್ಟ ವಲಯ ಕಚೇರಿಗಳಿಂದ ಅನುಮೋದಿಸಲ್ಪಟ್ಟ ಸಮ್ಮತಿ ಪತ್ರಗಳನ್ನು ಕಡ್ಡಾಯವಾಗಿ ಕಚೇರಿ ವೇಳೆಯಲ್ಲಿ ಹಾಜರು ಪಡಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ, ಅದರಂತೆ, ಮುಂಬರುವ ದಿನಗಳಲ್ಲಿ ಎಲ್ಲ ರೈತ ಬಾಂಧವರು ಒಳ್ಳೆಯ ಗುಣಮಟ್ಟದ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಸಿ, ಬರುವ ಹಂಗಾಮನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಎಂದು ಹುದಲಿ ಬೆಳಗಾಂ ಶುಗರ್ಸ ಪ್ರೈ ಲಿ ಎಂಡಿ ಅವರು ಪ್ರತಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article