ನೇಸರಗಿ: ಇಲ್ಲಿಗೆ ಸಮೀಪದ ಬಹು ದಿನಗಳ ಕನಸಾಗಿದ್ದ ಇಲ್ಲಿನ ಜನರ ಬಹು ಬೇಡಿಕೆಯ ವಾರದ ಸಂತೆಯೂ ಬುಧವಾರದಂದು ಗ್ರಾಮದ ಹಿರಿಯರ ಹಾಗೂ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ, ಸದಸ್ಯರ, ಅಭಿವೃದ್ಧಿ ಅಧಿಕಾರಿಗಳ, ಸಿಬ್ಬಂದಿ ವರ್ಗದ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆ ನೆರವೇರಿಸುವದರ ಮೂಲಕ ಬೆಳ್ಳಿಗ್ಗೆ 7 ರಿಂದ ಮದ್ಯಾಹ್ನ 2-00 ರ ವರೆಗೆ ಅದ್ದೂರಿಯಾಗಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ರೈತರು, ವ್ಯಾಪಾರಸ್ಥರು ಹುಮ್ಮಸಿನಲ್ಲಿ ನೂತನ ಸಂತೆಯಲ್ಲಿ ಭಾಗವಹಿಸಿದ್ದರು. ಗ್ರಾಮದ ಜನತೆಯಲ್ಲಿ ಖುಷಿ ಸಂಭ್ರಮ ಮನೆ ಮಾಡಿತು. ದೂರದ ಊರುಗಳಿಗೆ ತೆರಳಿ ಸಂತೆ ಆಯಾಸದಿಂದ ಸಂತೆ ಮಾಡದೇ ಆರಾಮವಾಗಿ ಸ್ವಂತ ಊರಲ್ಲಿ ಸಂತೆ ಮಾಡಿ ಸಂಭ್ರಮಿಸಿದರು.
ಸಂತೆ ಪ್ರಾರಂಬೊತ್ಸವ ಕಾರ್ಯಕ್ರಮದಲ್ಲಿ ಗ್ರಾ ಪಂ ಅಧ್ಯಕ್ಷ ಶ್ರೀಮತಿ ಭಾರತಿ ತಿಗಡಿ, ಉಪಾಧ್ಯಕ್ಷರಾದ ಕಾಶಿಮ ಜಮಾದಾರ, ಸದಸ್ಯರಾದ ರೇಣುಕಾ ಕಡಕೋಳ, ಶಾಂತವ್ವ ಹುಲಮನಿ, ವಿಜಯ ಯರಡಾಲ, ರಾಜು ಹಣ್ಣಿಕೇರಿ, ಮಂಜುಳಾ ಹುಲಮನಿ, ಸುಧಾ ಹೊಸಮನಿ, ಯಲ್ಲವ್ವ ಗುಡಿ, ಶಿವಪ್ಪ ಚೋಭಾರಿ, ಚಂದ್ರಯ್ಯ ಹಿರೇಮಠ, ರೈತ ಸಂಘದ ಮುಖಂಡ ಮಹಾಂತೇಶ ಹಿರೇಮಠ,ನೇಮಣ್ಣ ಬೆಳವಲ,ಪಾರಿಸ ಟಗರಿ,ಆಜಾದ ಸೈಯದ, ಮಹಾವೀರ ಅಲ್ಲಯ್ಯನವರ,ಅಜ್ಜಪ್ಪ ಕಮತಗಿ,ಮಹಾಂತೇಶ ಹಿರೇಮಠ,ಮಹಾಂತೇಶ ಬಡಿಗೇರ,ಬಸಯ್ಯ ಹಿರೇಮಠ,ಜ್ಞಾನದೇವ ತುಮ್ಮರಗುದ್ದಿ ಸೇರಿದಂತೆ ಮೇಕಲಮರಡಿ ಗ್ರಾಮದ ಗುರುಹಿರಿಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.


