ಬಳ್ಳಾರಿ, ಅಕ್ಟೋಬರ್ 09.ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಟ್ಯಾಕ್ಸ್ ಪ್ರಾಕ್ಟೀಷರ‍್ಸ್ ಇಂಡಿಯಾ, ಬಳ್ಳಾರಿ ಟ್ಯಾಕ್ಸ್ ಪ್ರಾಕ್ಟೀಷರ‍್ಸ್ ಅಸೋಸಿಯೇಷನ್, ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿರ‍್ಸ್ ಸ್ಟೀರಿಂಗ್ ಕಂಸ್ಟೋರಿಯA ಹಾಗೂ ಚೇತನ್ ಇನ್ಸಿಟ್ಯೂಟ್ ಆಫ್ ಬ್ಯುಸಿನೆಸ್ ಸೆಲ್ಯೂಷನ್ಸ್ ಅವರ ಜಂಟಿ ಆಶ್ರಯದಲ್ಲಿ `ತೆರಿಗೆ’ ಕಾರ್ಯಾಗಾರ ಬಿಡಿಸಿಸಿಐನ ಆಡಿಟೋರಿಯಂನಲ್ಲಿ ಬುಧವಾರ ನಡೆಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ವಾಣಿಜ್ಯ ತೆರಿಗೆ ಜಾರಿ ಇಲಾಖೆಯ ಜಂಟಿ ಆಯುಕ್ತರಾದ ಡಾ. ಕುಮಾರ್ ನಾಯಕ್ ಜಿ, ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್ನ ಸಹಾಯಕ ಆಯುಕ್ತರಾದ ಎನ್.ಎಂ. ಗಣೇಶ್ ಕುಮಾರ್, ಆಲ್ ಇಂಡಿಯಾ ಟ್ಯಾಕ್ಸ್ ಪೇಯರ್ಸ್ ಒಕ್ಕೂಟದ ಅಧ್ಯಕ್ಷರಾಗಿರುವ ಎಸ್.ಆರ್. ಮಠಪತಿ, ಕೆಪಿಸಿಇಎಸ್‌ಸಿಯ ಕಲಬುರ್ಗಿ ವಿಭಾಗದ ಉಪಾಧ್ಯಕ್ಷರಾಗಿರುವ ಕೆ.ಬಿ. ಸಂಜೀವ್ ಪ್ರಸಾದ್, ಟ್ಯಾಲಿ ಸೆಲ್ಯೂಷನ್ಸ್ನ ರವಿ ತಾಳಿಕೋಟೆ ಅವರು ಜಂಟಿಯಾಗಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಸ್ವಾಗತ ಕೋರಿ, ಪ್ರಾಸ್ತಾವಿಕ ಭಾಷಣ ಮಾಡಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜನಪರವಾಗಿ ಅನೇಕ ಸೇವಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. ನಮ್ಮ ಸಂಸ್ಥೆಯು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ, ಭವಿಷ್ಯದ ಉದ್ಯಮಿಗಳಿಗಾಗಿ ಇಂಕ್ಯುಬೇಷನ್ ಸೆಂಟರ್ ಪ್ರಾರಂಭಿಸಿದೆ. ವಿವಿಧ ವಿಷಯಗಳ ತಜ್ಞರು – ಪರಿಣಿತರು ಉದ್ಯಮದ ಆರಂಭದಿAದ ಮಾರುಕಟ್ಟೆಯವರೆಗೂ ಎಲ್ಲಾ ಹಂತದಲ್ಲೂ ಸಲಹೆ – ಮಾರ್ಗದರ್ಶನ ನೀಡಲಿದ್ದಾರೆ ಎಂದರು.
`ತೆರಿಗೆ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಜಸ್ಟಿನ್ ಕ್ರಿಸ್ಟಪರ್ ಅವರು, ಸ್ಪಾಂಜ್ ಐರನ್, ಮೆಡಿಕಲ್, ಕಿರಾಣಿ, ಕೋಲ್ಡ್ ಸ್ಟೋರೇಜ್, ಕಾಟನ್‌ಮಿಲ್ ಸೇರಿ ವಿವಿಧ ಕ್ಷೇತ್ರಗಳಲ್ಲಿಯ ತೆರಿಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ, `ತೆರಿಗೆ ಕಾರ್ಯಗಾರದ ಬಗ್ಗೆ’ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಟ್ಯಾಕ್ಸ್ ಪ್ರಾಕ್ಟೀಷನರ್ ಆಗಿರುವ ಶ್ರೀಧರ ಪಾರ್ಥಸಾರಥಿ ಅವರು, ನಾನಾ ರೀತಿಯ ತೆರಿಗೆಗಳ ಪಾವತಿ ಮತ್ತು ಇನ್ನಿತರೆಗಳ ಗೊಂದಲ – ಸಮಸ್ಯೆ; ತಾಂತ್ರಿಕ ಮಾರ್ಗದರ್ಶನ – ತಾಂತ್ರಿಕ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಟ್ಯಾಕ್ಸೇಷನ್ ಸಮಿತಿ ಚೇರ್ಮೆನ್ ಸಿಎ. ಕೆ. ರಾಜಶೇಖರ ಅವರು ಕಾರ್ಯಕ್ರಮ ನಿರೂಪಿಸಿದರು. ಬಿಟಿಪಿಎ ಅಧ್ಯಕ್ಷರಾಗಿರುವ ವೆಂಕಟೇಶ ಕುಲಕರ್ಣಿ ಅವರು ವಂದನಾರ್ಪಣೆ ಮಾಡಿದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ಹಿರಿಯ ವಕೀಲರಾದ, ಅಪ್ಪಯ್ಯ ಭಟ್, ಟ್ಯಾಕ್ಸ್ ಪ್ರಾಕ್ಟೀಷನರ್, ಉಸ್ಮಾನ್ ಶರೀಫ್ ಪ್ರಧಾನ ಕಾರ್ಯದರ್ಶಿ, ಬಿಟಿಪಿಎ,ಬಳ್ಳಾರಿ, ಚೌವ್ಹಾಣ ಮನೋಹರ, ಚೇತನ್ ಇನ್ಸಿಟ್ಯೂಟ್ ಆಫ್ ಬ್ಯುಸಿನೆಸ್ ಸೆಲ್ಯೂಷನ್ಸ್, ಟ್ಯಾಕ್ಸ್ ಪ್ರಾಕ್ಟೀಷನರಗಳಾದ, ಮಹಾಂತೇಶ ದಾದಿಗುಂಡಿ, ಉಪಾಧ್ಯಕ್ಷರು, ಕೆ.ಎಸ್.ಟಿ.ಪಿ.ಎ,ಬೆಳಗಾವಿ, ಮಹಾಂತೇಶ ಮುದುನೂರು, ಮಾಜಿ ಜಂಟಿ ಕಾರ್ಯದರ್ಶಿಗಳು, ಐಟಿಪಿಐ, ಬೆಳಗಾವಿ, ಪ್ರಶಾಂತ ಎಂ, ಫೌಂಡರ್ ಚೇರ್ಮನ್, ಆಲ್ ಇಂಡಿಯಾ ಟ್ಯಾಕ್ಸ್ ಪೇಯರ್ಸ್ ಒಕ್ಕೂಟದ ಬಳ್ಳಾರಿಯ ಟ್ಯಾಕ್ಸ್ ಪ್ರಾಕ್ಟೀಷನರ್‌ಗಳು, ಉದ್ಯಮಿಗಳು ಹಾಗೂ ವೃತ್ತಿಪರರು, ವಿವಿಧ ಸಂಘ / ಸಂಸ್ಥೆಗಳವರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.