ಮೂರು ಕರಡಿಗಳ ಯಶಸ್ವಿ ಸೆರೆ

MK HasiruKranti
ಮೂರು ಕರಡಿಗಳ ಯಶಸ್ವಿ ಸೆರೆ
WhatsApp Group Join Now
Telegram Group Join Now


ಬಳ್ಳಾರಿ,ಮಾ.27
ಸಂಡೂರು ತಾಲ್ಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಟೌನ್‌ಶಿಪ್ ವ್ಯಾಪ್ತಿಯಲ್ಲಿ ಕಳೆದ ಹತ್ತು ತಿಂಗಳಿನಿAದ ಬೀಡುಬಿಟ್ಟಿದ್ದ ತಾಯಿ ಕರಡಿ ಹಾಗೂ ಎರಡು ಮರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ‘ಆಟೋಮ್ಯಾಟಿಕ್ ಮೊಬೈಲ್ ಆಪ್ ಆಧಾರಿತ ಕೇಜ್ ಲಾಕಿಂಗ್ ಸಿಸ್ಟಮ್’ ಬಳಸುವ ಮೂಲಕ ಮೂರೂ ಕರಡಿಗಳನ್ನು ಏಕಕಾಲಕ್ಕೆ ಬಂಧಿಸಿರುವುದು ವಿಶೇಷವಾಗಿದೆ.
ಕಳೆದ ಸುಮಾರು 10 ತಿಂಗಳಿನಿAದ ಈ ಕರಡಿಗಳ ಕುಟುಂಬ ಜಿಂದಾಲ್ ವಿದ್ಯಾನಗರ ಟೌನ್‌ಶಿಪ್‌ನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ನಿವಾಸಿಗಳಲ್ಲಿ ಭೀತಿ ಉಂಟಾಗಿದ್ದರೂ, ಅರಣ್ಯ ಇಲಾಖೆಯ ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಿರಲಿಲ್ಲ. ವನ್ಯಜೀವಿ ವಿಭಾಗದ ಪಿಸಿಸಿಎಫ್ ಅವರ ಆದೇಶದನ್ವಯ, ಬಳ್ಳಾರಿ ಡಿಸಿಎಫ್ ಕೆ.ಎನ್.ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
ಎಸಿಎಫ್ ಶರಣ್ ಕುಮಾರ್, ಆರ್‌ಎಫ್‌ಒಗಳಾದ ಸಯ್ಯದ್ ದಾದಾ ಖಲಂದರ್ ಮತ್ತು ಮಂಜುನಾಥ್, ಡಿಆರ್‌ಎಫ್‌ಒಗಳಾದ ಮೋಹನ್ ಹಾಗೂ ಗುರುಸ್ವಾಮಿ, ಬಿಎಫ್‌ಒಗಳಾದ ವೆಂಕಟೇಶ್ ಮತ್ತು ಶ್ರೀಧರ್ ಅವರ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಇವರಿಗೆ ಪಶುವೈದ್ಯರಾದ ಡಾ. ಪ್ರಕೃತಿ ಹಾಗೂ ವೈಲ್ಡ್ ಲೈಫ್ ಎಸ್‌ಒಎಸ್ ಎನ್‌ಜಿಒ ಸಂಸ್ಥೆಯವರು ಸಾಥ್ ನೀಡಿದ್ದರು.
ಸೆರೆಹಿಡಿದ ತಾಯಿ ಕರಡಿಗೆ ಮುಂದಿನ ದಿನಗಳಲ್ಲಿ ಅದರ ಚಲನವಲನದ ಮೇಲೆ ನಿಗಾ ಇಡಲು ‘ರೇಡಿಯೋ ಕಾಲರ್’ ಅಳವಡಿಸಲಾಗಿದೆ. ನಂತರ ಮೇಲಾಧಿಕಾರಿಗಳ ಸೂಚನೆಯಂತೆ, ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ತಾಯಿ ಹಾಗೂ ಮರಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜ್ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article