ನಿರಂತರ ಪರಿಶ್ರಮ, ಅಧ್ಯಯನಶೀಲತೆಯೇ ಯಶಸ್ಸಿಗೆ ರಹದಾರಿ: ಎಸ್. ಎಂ. ಜಂಗಲಗಿ

Ravi Talawar
ನಿರಂತರ ಪರಿಶ್ರಮ, ಅಧ್ಯಯನಶೀಲತೆಯೇ ಯಶಸ್ಸಿಗೆ ರಹದಾರಿ: ಎಸ್. ಎಂ. ಜಂಗಲಗಿ
WhatsApp Group Join Now
Telegram Group Join Now
ಅಥಣಿಯ ಅನ್ನಪೂರ್ಣಾ ಕಾಲೇಜಿನ ಬಿಬಿಎ, ಬಿಸಿಎ, ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಅಥಣಿ: ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ, ಸಂಯಮ, ವ್ಯವಹಾರಿಕ ಜ್ಞಾನ, ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮಗಳನ್ನು ರೂಢಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಸಿದ್ರಾಯ್ ಜಂಗಲಗಿ ಅಭಿಪ್ರಾಯಪಟ್ಟರು.
            ಅವರು ಸ್ಥಳೀಯ ಅನ್ನಪೂರ್ಣಾ ಸಮೂಹದ ಶಿಕ್ಷಣ ಸಂಸ್ಥೆಗಳ ಬಿಸಿಎ, ಬಿಬಿಎ ಹಾಗೂ ಬಿ.ಕಾಂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
           ಇನ್ನೊರ್ವ ಅತಿಥಿಗಳಾಗಿದ್ದ ಜೆ. ಎ. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ.ಪಿ. ಮೇತ್ರಿ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಸಂವೇದನೆಯು ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯವಾಗಿದೆ ಎಂದರಲ್ಲದೇ ಅಥಣಿ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಅಗತ್ಯತೆಯನ್ನು ಮನಗಂಡು ಡಾ” ಪಾಂಗಿ ಪರಿವಾರದವರು ನೂತನವಾಗಿ ಆರಂಭಿಸಿರುವ ಮಹಾವಿದ್ಯಾಲಯದ ಸದುಪಯೋಗವನ್ನು ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕೆಲ ನೀತಿಕಥೆಗಳನ್ನು ಉದಾಹರಿಸುತ್ತಾ ವೈನೋದಿಕವಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
         ಮತ್ತೋರ್ವ ಅತಿಥಿ ಕೆ’ಎಲ್’ಇ ಸಂಸ್ಥೆಯ ಸ್ಥಳೀಯ ಎಸ್.ಎಸ್.ಎಂ.ಎಸ್. ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್. ಎನ್. ಇನಾಂದಾರ್ ಮಾತನಾಡಿ, ಇಂದಿನ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಕೌಶಲ್ಯ ಹಾಗೂ ಸಾಧ್ಯವಾದಷ್ಟು ಭಾಷೆಗಳನ್ನು ಕಲಿತು ನಿರಂತರ ಜ್ಞಾನಾರ್ಜನೆ ಮೂಲಕ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಳ್ಳಬೇಕೆಂದು ಕರೆ ನೀಡಿದರು.
         ಅಧ್ಯಕ್ಷತೆ ವಹಿಸಿದ್ದ ಎಜಿಆಯ್ ಸಂಸ್ಥೆಯ ಕಾರ್ಯದರ್ಶಿ ಡಾ” ರವಿ ಎ. ಪಾಂಗಿ ಮಾತನಾಡಿ, ಕೇವಲ ಅಂಕಗಳು ಮಾತ್ರ ಗುಣಮಟ್ಟದ ಮಾನದಂಡಗಳಾಗಬಾರದು. ಕಲಿಕೆಯು ಸಂವಹನ ಕೌಶಲ್ಯ, ಆತ್ಮವಿಶ್ವಾಸ, ಸಕಾರಾತ್ಮಕ ಆಲೋಚನೆ ಮತ್ತು ಭಾವನಾತ್ಮಕ ಬೆಸುಗೆಯಿಂದ ಕೂಡಿರಬೇಕು ಅಂದಾಗ ಮಾತ್ರ ಅದು ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ದುರಂತವೆಂದರೆ ಪ್ರತಿವರ್ಷ ಪದವೀಧರರಾಗಿ ಹೊರ ಬೀಳುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಪದವಿಗೆ ತಕ್ಕ ಕೌಶಲ್ಯಗಳು ಇಲ್ಲದಿರುವುದು ವಿಷಾದನೀಯವೆಂದರು. ಪದವಿ ಪಡೆಯುವ ವಿದ್ಯಾರ್ಥಿಯು ಕೇವಲ ಅಂಕಗಳತ್ತ ಮಾತ್ರ ಗಮನಹರಿಸದೇ ಪದವಿ ಮುಗಿಯುವ ಹೊತ್ತಿಗೆ ಒಬ್ಬ ಸಮರ್ಥ ಮಾನವ ಸಂಪನ್ಮೂಲವಾಗಿ ಹೊರ ಹೋಗಬೇಕು ಎಂಬುದು ಎಜಿಆಯ್ ಸಂಸ್ಥೆಯ ಸಂಕಲ್ಪವಾಗಿದೆ ಎಂದರು.
          ಎಜಿಆಯ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಪವನ ಮಸಾಳೆ, ಪ್ರಿಯಂಕಾ ಕಲಾಲ ಮತ್ತು ಮಲ್ಲಿಕಾ ಗೆಜ್ಜಿ ಅವರ ಚಿತ್ರಕಲೆ ಹಾಗೂ ಸ್ಪಂದನಾ ಸಾಳವೆ ಅವರ ಭರತನಾಟ್ಯ ನೋಡುಗರ ಗಮನ ಸೆಳೆಯಿತು. ಎಜಿಆಯ್ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವಿಲಿಯಂ ಷೇಕ್ಸ್‌ಪಿಯರ್’ರವರ ‘ಮ್ಯಾಕ್’ಬೆತ್’ ನಾಟಕ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು. ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎರಡು ಹಂತಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ವೈನೋದಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆದವು.
         ಈ ಸಂದರ್ಭದಲ್ಲಿ ಎಜಿಆಯ್ ಆಡಳಿತಾಧಿಕಾರಿ ಪ್ರೊ. ರಮೇಶ್ ಪೈರಾಸಿ, ಪ್ರೊ. ಜಮೀರ್ ಮುಲ್ಲಾ, ಬಿಎಸ್ಸಿ ನರ್ಸಿಂಗ್ ಪ್ರಾಂಶುಪಾಲ ಪ್ರೊ. ಮಲ್ಲಪ್ಪ ಶಿವಾಪುರ, ಪ್ಯಾರಾ ಮೆಡಿಕಲ್ ಪ್ರಾಚಾರ್ಯ ಪ್ರೊ. ಕಿರಣ ಕೆಂಪಿಪಾಟೀಲ, ಪ್ರೊ. ಶ್ರೇಯಸ್ ಸಂಗಣ್ಣವರ, ಪ್ರೊ. ಅಜಯ ಅಕ್ಕಿವಾಟೆ, ಪ್ರೊ. ಶೈಲಜಾ ನಾಯಿಕ,  ಕು. ಸನಾ ಸಾಂಗ್ಲಿಕರ್, ಕು. ಪ್ರತೀಕ್ಷಾ ಶಿಂಧೆ, ಕು. ವಾಸಿಂ ನಿಂಬಾಳ, ಪ್ರೊ. ವಾಣಿಶ್ರೀ ಕಾಮಗೌಡ, ಪ್ರೊ. ರಾಕೇಶ್ ಆಲಬಾಳ, ಡಾ. ಕುಮಾರ ತಳವಾರ, ಶಿವಾನಂದ ಬೆಳುಂಡಿಗಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
           ಗಾಯತ್ರಿ ಪತ್ತಾರ ಮತ್ತು ಕಾವೇರಿ ಪಾಟೀಲ ಪ್ರಾರ್ಥಿಸಿದರು. ಹನುಮಂತ ಕೊಪ್ಪದ ಹಾಗೂ ಸಂಗಡಿಗರು ನಿರ್ವಹಿಸಿದರು. ವೈಷ್ಣವಿ ಕುರಣಿ ಸ್ವಾಗತಿಸಿದರು. ಬಿಸಿಎ, ಬಿಬಿಎ, ಬಿ.ಕಾಂ. ಪ್ರಾಚಾರ್ಯ ಪ್ರೊ. ಪರಮಾನಂದ ನಾಯಿಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೀಯಂಕಾ ತೇಲಿ ಮತ್ತು ವೈಷ್ಣವಿ ಪರಿಚಯಿಸಿದರು. ಸ್ಮೃತಿ ಕುಲಕರ್ಣಿ  ಹಾಗೂ ಅಕ್ಷತಾ ಕೊಪ್ಪದ ನಿರೂಪಿಸಿದರು. ಪಲ್ಲವಿ ಠಕ್ಕನ್ನವರ ವಂದಿಸಿದರು.
WhatsApp Group Join Now
Telegram Group Join Now
Share This Article