ಬಳ್ಳಾರಿ: ಕನ್ನಡ ಚೈತನ್ಯ ವೇದಿಕೆ ವತಿಯಿಂದ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ಜಿಲ್ಲೆಗೆ ತರುವಲ್ಲಿ ಯಶಸ್ವಿಯಾದ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಿಷ್ಟಿರುದ್ರಪ್ಪನವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿಷ್ಟಿ ರುದ್ರಪ್ಪನವರು ಮುಂದಿನ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಯಲ್ಲಿ ನಡೆಸಲು ಎಲ್ಲಾ ರೀತಿಯ ಸಹಕಾರ ಅಗತ್ಯ. ವಿಶೇಷವಾಗಿ ಬಳ್ಳಾರಿಯ ಕನ್ನಡಿಗರು ಸ್ವಯಂಸೇವಕರಾಗಿ ಸೇವೆ ಮಾಡಿದಾಗ ಮಾತ್ರ ಸಮ್ಮೇಳನ ಯಶಸ್ವಿಯಾಗಲು ಸಾಧ್ಯ ಇಲ್ಲಿ ಯಾವುದೇ ಜಾತಿ. ಧರ್ಮ. ಪಕ್ಷ .ಭೇದ ಮರೆತು ಕನ್ನಡ ತಾಯಿ ಭುವನೇಶ್ವರಿ ಜಾತ್ರೆಯನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಕನ್ನಡ ಚೈತನ್ಯ ವೇದಿಕೆ ಮಹಿಳಾ ಅಧ್ಯಕ್ಷರು ಜ್ಯೋತಿ ಪ್ರಕಾಶ್ ಮಾತನಾಡಿ 88ನೇ ಸಮ್ಮೇಳನ ನಡೆಯುವವರೆಗೂ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳು ನಡೆಯಬೇಕು 66 ವರ್ಷಗಳ ನಂತರ ಬಂದ ಈ ಸಮ್ಮೇಳನವನ್ನು ಎಲ್ಲರೂ ಜೊತೆಗೂಡಿ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಚೈತನ್ಯ ವೇದಿಕೆ ಅಧ್ಯಕ್ಷ ಬಿಎಸ್ ಪ್ರಭು ಕುಮಾರ್ .ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಟಿ ರುದ್ರಪ್ಪ .ಅಜಯ್ ಬಣಕಾರ್ .ತಿಪ್ಪೇರುದ್ರಪ್ಪ .ಶಿವಲಿಂಗಪ್ಪ ಅಂದ್ಯಾಳ. ಹನುಮಂತಪ್ಪ .ಮಲ್ಲಿಕಾರ್ಜುನ್ ಹಾಗೂ ಕನ್ನಡ ಚೈತನ್ಯ ವೇದಿಕೆ ಮಹಿಳಾ ಅಧ್ಯಕ್ಷ ಜ್ಯೋತಿ ಪ್ರಕಾಶ್ ಉಪಸ್ಥಿತರಿದ್ದರು.