ನಾಗರಿಕ ಸೌಲಭ್ಯಕ್ಕಾಗಿ ಸಂಗ್ರಹಿಸಿದ ಸಹಿಗಳ ಪತ್ರ ಡಿಸಿಗೆ ಸಲ್ಲಿಕೆ 

Pratibha Boi
ನಾಗರಿಕ ಸೌಲಭ್ಯಕ್ಕಾಗಿ ಸಂಗ್ರಹಿಸಿದ ಸಹಿಗಳ ಪತ್ರ ಡಿಸಿಗೆ ಸಲ್ಲಿಕೆ 
WhatsApp Group Join Now
Telegram Group Join Now
ಬಳ್ಳಾರಿ.ಜು.31..ನಗರದಲ್ಲಿನ ಅನೇಕ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಬಳ್ಳಾರಿ ನಾಗರೀಕ ಹೋರಾಟ ಸಮಿತಿ ವತಿಯಿಂದ ಸಂಗ್ರಹಿಸಲಾದ ಒಂದು ಲಕ್ಷ ಸಹಿಗಳುಳ್ಳ ಮನವಿ ಪತ್ರವನ್ನು ಬುಧವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಅಧಿಕಾರಿಗಳು ಮತ್ತು ನಾಗರಿಕರ ಸಭೆ ನಡೆಸಿ ಸಭೆಯಲ್ಲಿ ನಗರದ ಸಮಸ್ಯೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚಿಸಿ ಪರಿಹರಿಸಲು ಆದಷ್ಟು ಬೇಗ ಒಂದು ಸಭೆಯನ್ನು ಕರೆಯಲು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿತ್ರ ಅವರಿಗೆ ಮನವಿ ಮಾಡಿಕೊಳ್ಳಲಾಯಿತು ಮನವಿ ಪತ್ರವನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮತ್ತು ನಾಗರಿಕ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆಯನ್ನು ಕರೆಯುವುದಾಗಿ ಮತ್ತು ಚರ್ಚಿಸುವುದಾಗಿ ಭರವಸೆ ಇತ್ತರು.
ಇದೇ ದಿನ ನಾಗರಿಕ ಹೋರಾಟ ಸಮಿತಿ ವತಿಯಿಂದ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮತ್ತು ಮೇಯರ್ ರವರಿಗೂ ಹಲವಾರು ದಿನಗಳಿಂದ ಬಳ್ಳಾರಿ ನಾಗರಿಕರಿಂದ ಸಂಗ್ರಹಿಸಿದ ಸಾವಿರಾರು ಸಹಿಗಳನ್ನು ಮತ್ತು ಮನವಿ ಪತ್ರವನ್ನು ಸಲ್ಲಿಸಲಾಯಿತು. ಬಳ್ಳಾರಿಯ ಬಾಪೂಜಿನಗರ, ಪಿಂಜಾರ ಓಣಿ, ಜನತಾ ಗ್ಯಾರೇಜ್, ನಾಲಾ ಬೀದಿ, ಕಪ್ಪಗಲ್ ರಸ್ತೆ, ಸುಧಾಕ್ರಾಸ್ ಬಡಾವಣೆಗಳಿಂದ ಬಂದAತಹ ನಾಗರೀಕರ ಸಮಸ್ಯೆಗಳನ್ನು ಆಲಿಸಿ, ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಆಯುಕ್ತರು ಮತ್ತು ಮೇಯರ್ ರವರು ಎಲ್ಲಾ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ಮತ್ತು ಬಡಾವಣೆಗಳಿಗೆ ಭೇಟಿ ಇತ್ತು ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಭರವಸೆಯಿತ್ತರು.
ಈ ಸಂದರ್ಭದಲ್ಲಿ ವಕೀಲರು ಹಾಗೂ ಬಳ್ಳಾರಿ ನಾಗರೀಕ ಹೋರಾಟ ಸಮಿತಿಯ ಸಂಚಾಲಕ ಸೋಮಶೇಖರ ಗೌಡ , ನರಸಪ್ಪ ಉಪ್ಪಾರ್, ನಾಗರತ್ನ ಎಸ್ ಜಿ, ಗೋವಿಂದ್, ಗುರುಳ್ಳಿ ರಾಜ ಸೇರಿದಂತೆ ಸಂಘಟನೆಯ ಕಾರ್ಯಕಾರಿ ಸಮಿತಿಯ ಸದಸ್ಯರು ನಾಗರಿಕರು ಇದ್ದರು.
WhatsApp Group Join Now
Telegram Group Join Now
Share This Article