ಜಮಖಂಡಿ;ಸರ್ಕಾರ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕೆಂದು ಆಗ್ರಹಿಸಿ ರಾಜ್ಯರೈತಸಂಘ ಹಾಗೂ ಸ್ಪರ್ಧಾರ್ಥಿಗಳ ಒಕ್ಕೂಟದ ವತಿಯಿಂದ ಶುಕ್ರವಾರ ಉಪವಿಭಾಗಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಪೊಲೀಸ್ ಪೇದೆಗಳ ನೇಮಕಾತಿಯಲ್ಲಿ ವಯೋಮಿತಿಯನ್ನು ಎಸ್‌ಸಿ, ಎಸ್‌ಟಿ. ಓಬಿಸಿ ಗಳಿಗೆ 33 ವರ್ಷ, ಹಾಗೂ ಸಾಮಾನ್ಯ ವರ್ಗಕ್ಕೆ 30 ವರ್ಷಗಳಿಗೆ ಹೆಚ್ಚಿಸಬೇಕು, ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನೇಮಕಾತಿ ನಡೆಯದ ಕಾರಣ ಅರ್ಹ ಅಭ್ಯರ್ಥಿಗಳ ವಯೋಮಿತಿಯನ್ನು ಐದು ವರ್ಷಗಳಿಗೆ ಸಡಿಲಿಕೆ ಮಾಡಬೇಕು, ಮೀಸಲಾತಿ, ಒಳ ಮೀಸಲಾತಿಯ ಗೊಂದಲಗಳನ್ನು ಕೂಡಲೇ ಬಗೆ ಹರಿಸುವ ಮೂಲಕ ಅಧಿಸೂಚನೆ ಹೊರಡಿಸಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು. ಎಲ್ಲ ನೇಮಕಾತಿಗಳ ದುಬಾರಿ ಅರ್ಜಿ ಶುಲ್ಕವನ್ನು ಕಡಿಮೆ ಗೊಳಿಸಬೇಕು ಹಾಗೂ ಪರಿಕ್ಷಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು, ಕೆಪಿಎಸ್‌ಸಿ, ಕೆಇಎ, ಕೆಎಸ್‌ಪಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಪ್ರತಿವರ್ಷ ಪ್ರಕಟಿಸಬೇಕು, ನಿಗದಿತ ವೇಳಾ ಪಟ್ಟಿಯಂತೆ ನೇಮಕಾತಿ ನಡೆಸಬೇಕು, ಎಲ್ಲ ನೇಮಕಾತಿಗಳಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು ಕೇಂದ್ರ ಸರ್ಕಾರದ ಯುಪಿಎಸ್‌ಸಿ, ಸಿಎಸ್‌ಇ ಪರೀಕ್ಷೆಗಳು ಕನ್ನಡಲ್ಲಿ ನಡೆಯಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಶಾಸಕ ಜಗದೀಶ ಗುಡಗುಂಟಿ ಹಾಗೂ ತಹಸೀಲ್ದಾರ ಅನೀಲ ಬಡಿಗೇರ ಮನವಿ ಸ್ವೀಕರಿಸಿದರು. ರೈತಸಂಘದ ಅಧ್ಯಕ್ಷ ಶ್ರೀಶೈಲ ಭೂಮಾರ, ರಾಜು ನದಾಫ, ಸಂತೋಷ ಮಮದಾಪುರ, ನ್ಯಾಯವಾದಿ ಕೆ .ಟಿ. ಕವಟಕೊಪ್ಪಪ್ರದೀಪ ಮೆಟಗುಡ್ಡ, ಹೆಗಡೆ, ರಾಜು ಪತ್ತಾರ, ಮುಂತಾದವರಿದ್ದರು.


