ವಸತಿ ನಿಲಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು: ಶಾಸಕ ಐಹೊಳೆ

Ravi Talawar
ವಸತಿ ನಿಲಯವನ್ನು  ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು: ಶಾಸಕ ಐಹೊಳೆ
WhatsApp Group Join Now
Telegram Group Join Now
ರಾಯಬಾಗ: ಮೆಟ್ರಿಕ ನಂತರ ವಿದ್ಯಾಭ್ಯಾಸ ಮಾಡುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸುಸಜ್ಜಿತ ವಸತಿ ನಿಲಯ ಕಟ್ಟಡ ನಿರ್ಮಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶುಕ್ರವಾರ ಪಟ್ಟಣದ ಹೊರವಲಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ 50 ವಿದ್ಯಾರ್ಥಿಗಳ ಸಾಮರ್ಥ್ಯದ ವಸತಿ ನಿಲಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೂರದ ಊರುಗಳಿಂದ ಪಟ್ಟಣಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯ ಅತ್ಯಂತ ಅನುಕೂಲವಾಗಲಿದ್ದು, ನಿಲಯದ ಪಾಲಕರು ಇಲ್ಲಿ ಇರುವ ವಸತಿ ವಿದ್ಯಾರ್ಥಿಗಳಿಗೆ ಒಳ್ಳೆಯ ಅಡುಗೆ ಮಾಡಿ ಬಡಿಸಬೇಕು, ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕೆಂದರು.
ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಎಫ್.ಯು.ಪೂಜಾರ, ತಾಲೂಕು ವಿಸ್ತರಣಾ ಅಧಿಕಾರಿ ಪ್ರವೀಣ ನಂದಾ, ನಿಲಯ ಪಾಲಕ ಬಸವರಾಜ ಹಿರೇಕೊಡಿ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ, ಮುಸ್ತಾಕ ಮುಲ್ಲಾ, ಇಮ್ತಿಯಾಜ ಮುಲ್ಲಾ, ರಜಾಕ ಡಾಂಗೆ, ಮಾರುತಿ ಬಂತೆ, ಯಲ್ಲಪ್ಪ ಭಜಂತ್ರಿ, ಅಮರೇಶ ಕಾಂಬಳೆ, ವಿಶ್ವನಾಥ ಮೊಪಕಾರ ಹಾಗೂ ವಸತಿ ನಿಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
WhatsApp Group Join Now
Telegram Group Join Now
Share This Article