ಬೆಳಗಾವಿ. ನಗರದ ಪ್ರತಿಷ್ಠಿತ ಶ್ರೀ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಗುರುವಂದನಾ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಲ್ಲಿ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳ ದಿವ್ಯ ಸಾನಿಧ್ಯದೊಂದಿಗೆ ನೆರವೇರಿತು.
ಕಾರ್ಯಕ್ರಮ ಉದ್ದೇಶಿಸಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ನಮ್ಮ ಸಂಸ್ಥೆ ಗೆ ಕಮಲಾ ಬಾಳೆಕುಂದ್ರಿಯವರ ಕೊಡುಗೆ ಅಪಾರವಾಗಿದೆ ಮತ್ತು ಪ್ರಚಲಿತ ದಿನಗಳಲ್ಲಿ ತಾಂತ್ರಿಕವಾಗಿ ಜಗತ್ತು ಬದಲಾಗುತ್ತಿದೆ ಅದರಂತೆ ವಿದ್ಯಾರ್ಥಿಗಳು ಕಷ್ಟ ಪಟ್ಟು ಮುಂದೆ ಬರಬೇಕಾಗಿದೆ. ಲಿಂಗಾಯತ ಗ್ರಂಥಾಲಯಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಕಿರಣಕುಮಾರ ಸವಣೂರ ಗ್ರಂಥಾಲಯದ ವಿವಿಧ ಆಯಾಮಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚೈರ್ಮನ್ ಎಫ್ ವಿ ಮಾನ್ವಿ, ಪ್ರಾಂಶುಪಾಲರಾದ ಡಾ, ಬಿ ಆರ್ ಪಟಗುಂಡಿ, ಗ್ರಂಥಪಾಲಕರಾದ ನಳಿನಿ ಅಂಬಲಿ ಹಾಗೂ ಸಹಾಯಕ ಗ್ರಂಥ ಪಾಲಕರಾದ ಯಲ್ಲಪ್ಪ ಮಡಿವಾಳರ, ವಿಠ್ಠಲ ಕುರುಬರ, ಶಶಿಕಲಾ ಹೊಸಮಠ ಮತ್ತು ವಿದ್ಯಾಲಯದ ವಿವಿಧ ವಿಭಾಗದ ಮುಖ್ಯ ಪ್ರಾಧ್ಯಾಪಕರು, ಶಿಕ್ಷಕರು ವಿದ್ಯಾರ್ಥಿಗಳು ಬಾಗವಹಿಸಿದ್ದರು.