ಬಳ್ಳಾರಿ 29.:ತಾಲೂಕಿನ ಹೊಸ ಯರಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಕ್ಷಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪೋಷಕರ ಪ್ರತಿಭಟನೆ ಶಾಲೆಯ ಹತ್ತಿರ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರಾದ ಶಾಂತಿಯವರು ಮಾತನಾಡಿ, ಹೊಸ ಯರಗುಡಿ ಸರ್ಕಾರಿ ಪ್ರಾಥಮಿಕ ಶಾಲೆ ಬಡವರಿಗೆ ಇರುವುದು ಇದು ಒಂದೇ ಸರ್ಕಾರಿ ಶಾಲೆ. ಈ ಶಾಲೆಯನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹೋಗಬೇಕೆಂದರೆ 5 ವರ್ಷದ ಮಕ್ಕಳು ಒಂದು ಕಿಲೋ ಮೀಟರ್ ದೂರ ಹೇಗೆ ಹೋಗಬೇಕು? ಜೊತೆಗೆ ಅಲ್ಲಿನ ಜನರು ಶಾಲೆಯ ಕಟ್ಟಡ ಸರಿ ಇಲ್ಲದಿದ್ದಾಗ ಊರಿನ ಜನರೆಲ್ಲರೂ ಸೇರಿ ಶಾಲೆಯ ರಸ್ತೆ ಸರಿ ಮಾಡಬೇಕೆಂದು ಹೋರಾಟ ಮಾಡಿದರು ಹಾಗೆಯೇ ಇಲ್ಲಿ 8ನೇ ತರಗತಿ ವರೆಗೂ ಶಾಲೆ ಸಹ ಮಾಡಬೇಕೆಂದು ಬೇಡಿಕೆ ಸಹ ಇಟ್ಟರು.ಹಾಗೆಯೇ ಇಲ್ಲಿ ವಾಸಿಸುವ ಜನರೆಲ್ಲರೂ ದುಡಿಯುವ ರೈತರು, ಕಾರ್ಮಿಕರು. ಬಡವರ ಮಕ್ಕಳು 150ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ದಾಖಲಾತಿ ಇರುವ ಸರ್ಕಾರಿ ಶಾಲೆ ಮುಚ್ಚಬಾರದು ಎಂಬುದು ಪೋಷಕರು ಆಗ್ರಹವಾಗಿದೆ.
ನಮ್ಮ ದೇಶದ ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರು ಇಡೀ ಜೀವನವನ್ನು ಶಿಕ್ಷಣಕ್ಕಾಗಿ ದುಡಿದು, ಶೋಷಿತರಿಗೆ, ದಲಿತರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅಕ್ಷರ ಕ್ರಾಂತಿಯ ಹರಿಕಾರರಾದರು. ಭಗತ್ ಸಿಂಗ್, ನೇತಾಜಿ ಅವರ ಕನಸು, “ಸ್ವಾತಂತ್ರ್ಯ ನಂತರ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ” ಎಂದು ಸಾರಿದರು.
ಅಧಿಕಾರಿದ ಚುಕ್ಕಾಣಿ ಹಿಡಿದ ಎಲ್ಲಾ ಸರ್ಕಾರಗಳು ಬಡ ಮಕ್ಕಳಿಂದ ಶಿಕ್ಷಣವನ್ನು ಕಿತ್ತುಕೊಂಡು, ಸಮಾಜವನ್ನು ಇನ್ನೂಷ್ಟು ಕತ್ತಲೆ ಕೋಣೆಯಲ್ಲಿ ಹಾಕುತ್ತಿದ್ದಾರೆ.
ಆದ್ದರಿಂದ ಸಾರ್ವಜನಿಕ ಶಿಕ್ಷಣ ಉಳಿಸಿ ಜನರ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಲು ಪ್ರಬಲ ಹೋರಾಟ ಕಟ್ಟಬೇಕು. ಹಾಗೂ ಶಿಕ್ಷಣವನ್ನು ಖಾಸಗೀಕರಣ ಮಾಡುತ್ತಿರುವ ಎಲ್ಲಾ ಸರ್ಕಾರಗಳ ವಿರುದ್ಧ ಜಾತಿ, ಧರ್ಮ ಬೇಧಬಾವವಿಲ್ಲದೆ ಎಲ್ಲಾರು ಒಂದಾಗಿ ಮತ್ತೊಂದು ನವೊದಯ ಚಳುವಳಿ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಪ್ರತಿಭಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ , ಎಐಡಿಎಸ್ಓನ
ಎಐಡಿಎಸ್ಓ ಸದಸ್ಯರಾದ ಕಾಂತೇಶ್, ತಿಪ್ಪೇಸ್ವಾಮಿ, ಎಸ್.ಡಿ.ಎಮ್.ಸಿ ಅಧ್ಯಕ್ಷರು ನಾಗಮ್ಮ ಹಾಗೂ ಊರಿನ ಸರ್ಕಾರಿ ಶಾಲೆ ಉಳಿಸುವ ಸಮಿತಿ ಅಧ್ಯಕ್ಷರು ಪಾರ್ವತಿ ಕಾರ್ಯದರ್ಶಿ ಅಂಬಣ್ಣ, ಸದಸ್ಯರಾದ ಶೇಖರ್, ಪೋತಪ್ಪ, ಲಕ್ಷ್ಮಮ್ಮ,ಹಾಗೂ ಹಿರಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.


