ಜಮಖಂಡಿ: ಮುಧೋಳ ತಾಲೂಕಿನಲ್ಲಿ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಸಿದ್ದಾಪೂರ ಗ್ರಾಮದ ಪುಷ್ಪಾತಾಯಿ ಪದವಿಪೂರ್ವ ಕಾಲೇಜಿನ ಬಾಲಕಿಯರ ಥ್ರೋಬಾಲ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.
ವಯಕ್ತಿಕ ವಿಭಾಗದಲ್ಲಿ ಬಸವರಾಜ ರಾಜಕೋಟಿ ಎತ್ತರ ಜಿಗಿತದಲ್ಲಿ ಪ್ರಥಮಸ್ಥಾನ, ವಾಣಿ ಮಮದಾಪೂರ ಉದ್ದ ಜಿಗಿತದಲ್ಲಿ ಪ್ರಥಮಸ್ಥಾನ, ಸಾವಿತ್ರಿ ಪುಂಡಿಬೀಜ ೧೧೦ ಮೀ. ಅಡೆತಡೆ ಓಟದಲ್ಲಿ ಪ್ರಥಮಸ್ಥಾನ, ಚೈತ್ರ ಹೊಸೂರ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ಸಚೀನ ತೆಗ್ಗಿ ೪೦೦ ಮೀಟರ ಅಡೆತಡೆ ಓಟದಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರೀಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಶಾಸಕ ಜಗದೀಶ ಗುಡಗುಂಟಿ, ಕರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ, ನಿರ್ದೇಶಕಿ ಪಾರ್ವತಿ ಗುಡಗುಂಟಿ, ಆಡಳಿತಾಧಿಕಾರಿ ವೈ.ವೈ.್ಹೊಟ್ಟಿ, ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ವೈ.ಭೂತಾಳಿ, ದೈಹಿಕಶಿಕ್ಷಣ ನಿರ್ದೇಶಕ ಗುರುಲಿಂಗ ಆಲಬಾಳ ಸಹಿತ ಆಡಳಿತ ಮಂಡಳಿ ಸದಸ್ಯರು ಉಪನ್ಯಾಸಕರು ಅಭಿನಂದಿಸಿದ್ದಾರೆ.


