ವಿದ್ಥಾರ್ಥಿಗಳು ಪ್ರಶ್ನೆ ಮಾಡುವುದನ್ನು ಕಲಿಯಿರಿ : ಹೊನ್ನೂರು ವಲಿ

Sandeep Malannavar
ವಿದ್ಥಾರ್ಥಿಗಳು ಪ್ರಶ್ನೆ ಮಾಡುವುದನ್ನು ಕಲಿಯಿರಿ : ಹೊನ್ನೂರು ವಲಿ
WhatsApp Group Join Now
Telegram Group Join Now
ಬಳ್ಳಾರಿ,ಜ.21.: ನಗರದ ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಸ್ವಾಯತ್ತ) ಜ.೨೪ರಂದು ಬೆಂಗಳೂರಿನಲ್ಲಿ ಜನಪರ ಶಿಕ್ಷಣ ನೀತಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಅಖಿಲ ಭಾರತ ಜನ ಸಂಸತ್ತು ಅಂಗವಾಗಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಅರ್ಥಶಾಸ್ತçದ ವಿಭಾಗದ ಮುಖ್ಯಸ್ಥ ಹೊನ್ನೂರು ವಲಿ ಮಾತನಾಡುತ್ತಾ “ವಿದ್ಯಾರ್ಥಿಗಳು ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಅಂಧವಾಗಿ ಯಾರನ್ನೂ ಅನುಕರಿಸಬಾರದು. ಶಿಕ್ಷಣ ನೀತಿ ರೂಪಿಸುವಾಗ ಶಿಕ್ಷಣಕ್ಕೆ ಸಂಬAಧಪಟ್ಟವರ ಅಭಿಪ್ರಾಯ ಪಡೆಯುವುದು ಅತ್ಯಾವಶ್ಯಕ” ಎಂದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಸಂಚಾಲಕರಾದ ಸೋಮಶೇಖರ ಗೌಡ ಮಾತನಾಡುತ್ತಾ “ಕೇಂದ್ರ ಬಿಜೆಪಿ ಸರ್ಕಾರ ರಾಷ್ಟಿçÃಯ ಶಿಕ್ಷಣ ನೀತಿ ೨೦೨೦ (ಎನ್.ಇ.ಪಿ) ಜಾರಿಗೊಳಿಸಿದ ನಂತರ ದೇಶವ್ಯಾಪಿ ಈ ಶಿಕ್ಷಣ ವಿರೋಧಿ ನೀತಿಯ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಲಾಯಿತು. ಮನವಿಗಳನ್ನು ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ಎನ್.ಇ.ಪಿಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೆ ತಂದಿತು. ಆದರೆ ವಿಪರ್ಯಾಸವೆಂದರೆ, ರಾಜ್ಯ ಸರ್ಕಾರ ರಾಷ್ಟಿçÃಯ ಶಿಕ್ಷಣ ನೀತಿಯ ಭಾಗವಾದ, ಸರ್ಕಾರಿ ಶಾಲೆಗಳನ್ನು ಮುಚ್ಚುವ, ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆಯನ್ನು ಜಾರಿಗೆ ತಂದಿದೆ. ಇದು ಅತ್ಯಂತ  ನೋವಿನ ವಿಚಾರ. ಜನವರಿ ೨೪ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಜನ ಸಂಸತ್ತು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ” ಕರೆ ನೀಡಿದರು.
ಪ್ರಾಸ್ತಾವಿಕ ಪ್ರಾಧ್ಯಾಪಕ ಹುಚ್ಚುಸಾಬ್ ಮಾತನಾಡುತ್ತಾ, ಅಖಿಲ ಭಾರತ ಶಿಕ್ಷಣ ಸಮಿತಿಯು ಜನತೆಯ ಸಂಸತ್ತು ಸಂಘಟಿಸಿ, ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಪರ್ಯಾಯ ಶಿಕ್ಷಣದ ನೀತಿಯ ಕರಡನ್ನು ಸಲ್ಲಿಸುತ್ತಿರುವ ಅತ್ಯಂತ ಸಮಂಜಸ ಹಾಗೂ ಶ್ಲಾಘನೀಯ ಕ್ರಮ” ಎಂದರು.
ಉಪನ್ಯಾಸಕ ದುರ್ಗಪ್ಪ ಮಾತನಾಡುತ್ತಾ, “ಸರ್ಕಾರಿ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ಬದಲಿಗೆ ದೊಡ್ಡ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಇರುವುದು ಶಿಕ್ಷಣದ ಪರಿಸ್ಥಿತಿಯನ್ನು ಸೂಚಿಸುತ್ತದೆ” ಎಂದರು.
ಈ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರರ ಸಿಬ್ಬಂದಿ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article