ಮುಧೋಳ:ಜು.೨೧., ತಾಲೂಕಿನ ಇಂಗಳಗಿ ಗ್ರಾಮದ “ಶ್ರೀ ವಿಧ್ಯಾದೀಪ ” ಜ್ಞಾನ ವಿಕಾಸ ಕೇಂದ್ರದಲ್ಲಿ ಶುಕ್ರ ವಾರ ದಂದು “ಬೀದಿ ನಾಟಕ”ಕಾರ್ಯಕ್ರಮ ಜರುಗಿತು.
ಅಡವಿ ಸಿದ್ದೇಶ್ವರ ಮಠದ ಶ್ರೀ ಗಣೇಶ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಸಿ ಆಧುನಿಕ ಮಾಧ್ಯಮಗಳಿಂದ ಬೀದಿ ನಾಟಕಗಳು ಕಣ್ಮರೆಯಾಗುತ್ತಿವೆ. ಜನಸಾಮಾನ್ಯರಿಗೆ ನೇರವಾಗಿ ಸಂದೇಶ ತಲುಪಿಸುವ ಮಾಧ್ಯಮವೇ ನಾಟಕವಾಗಿದೆ. ಪ್ರಸ್ತುತ ದಿನದಲ್ಲಿರುವ ಅನಿ? ಪದ್ದತಿಗಳನ್ನ ಬಿತ್ತರಿಸಿ ಜಾಗೃತಿ ಮೂಡಿಸುವ ಕಾರ್ಯ ಸಮುದಾಯಗಳ ಸಾಮರಸ್ಯದ ಬದುಕಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಜೋಡಿ ಬಸವೇಶ್ವರ ಕಲಾ ತಂಡದವರು ಬಯಲು ಶೌಚಾಲಯ ಬಳಕೆಯ ದು?ರಿಣಾಮ,ಮೊಬೈಲ್ ಬಳಕೆ,ನೀರು ಉಳಿಸುವ,ಬಾಲ್ಯ ವಿವಾಹ, ಸರ್ಕಾರಿ ಯೋಜನೆಯ ಕಾರ್ಯಕ್ರಮಗಳ ಕುರಿತು ಬೀದಿ ನಾಟಕದ ಪ್ರದರ್ಶನ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಮೇತ್ರಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಬಂದವ್ವ ಮೇತ್ರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುವರ್ಣಾ ನಂದಿಕೋಲಮಠ, ಮೇಲ್ವಿಚಾಲಕಿ ಫಕಿರವ್ವ ಶೇಖ್, ಗೀತಾ ದೇವಿಯವರ, ಹಣಮಂತ ಪಾಟೀಲ ಮತ್ತು ಗ್ರಾಮಸ್ಥರು ಹಾಜರಿದ್ದರು.