ರೈತರಿಗೆ ವಕ್ಫ್ ನೋಟಿಸ್: ನ.​​ 25 ರಿಂದ ರಾಜ್ಯಾದ್ಯಂತ ಬಿಜೆಪಿ ಜನ ಜಾಗೃತಿ ಅಭಿಯಾನ

Ravi Talawar
ರೈತರಿಗೆ ವಕ್ಫ್ ನೋಟಿಸ್: ನ.​​ 25 ರಿಂದ ರಾಜ್ಯಾದ್ಯಂತ ಬಿಜೆಪಿ ಜನ ಜಾಗೃತಿ ಅಭಿಯಾನ
WhatsApp Group Join Now
Telegram Group Join Now

ಬೆಂಗಳೂರು, ನವೆಂಬರ್​ 15: ಕರ್ನಾಟಕದ ವಿವಿಧ ಜಿಲ್ಲೆಗಳ ರೈತರಿಗೆ ವಕ್ಫ್​​ ಬೋರ್ಡ್ ​ ನೋಟಿಸ್​ ನೀಡಿದೆ. ಈ ವಿಚಾರವಾಗಿ ನವೆಂಬರ್​​ 25 ರಿಂದ ಡಿಸೆಂಬರ್​ 25ರವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ತಳಿಸಿದರು.

ವಕ್ಪ್ ಸಮಸ್ಯೆ ಎದುರಾಗಿರುವವರಿಗೆ ಮಾಹಿತಿ ನೀಡಲು ವಾರ್ ರೂಂ ಸ್ಥಾಪನೆ ಮಾಡುತ್ತಿದ್ದೇವೆ. ವಕ್ಫ್​​ನಿಂದ ಸಮಸ್ಯೆಗೆ ಸಿಲುಕಿದವರು 9035675734 ವಾಟ್ಸಪ್ ನಂಬರಿಗೆ ದೂರು ನೀಡಬಹುದು. ನಮ್ಮ ಯಾವುದೇ ನಾಯಕರನ್ನೂ ಭೇಟಿ ಮಾಡಿ ಮಾಹಿತಿ ಪಡೆಯಲು ಅವಕಾಶವಿದೆ. ನವೆಂಬರ್ 25 ರಿಂದ ಶಾಸಕ ಬಸನಗೌಟ ಪಾಟೀಲ್​ ಯತ್ನಾಳ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್, ಅಣ್ಣಾ ಸಾಹೇಬ್ ಜೊಲ್ಲೆ ಸೇರಿದಂತೆ ಹಲವರು ಜಾಥಾ ಪ್ರಾರಂಭವಾಗಲಿದೆ.

ಮೂರು ಬೇಡಿಕೆಗಳೊಂದಿಗೆ ಅಭಿಯಾನ ನಡೆಯಲಿದೆ. 1954 ರಿಂದ ರಚನೆಯಾಗಿರುವ ವಕ್ಪ್ ಸಂಬಂಧಿತ ಗೆಜೆಟ್ ಗಳನ್ನು ರದ್ದು ಮಾಡಬೇಕು. ರೈತರು, ದೇವಸ್ಥಾನ ಸೇರಿದಂತೆ ವಕ್ಫ್ ಸ್ವಾಧೀನಕ್ಕೆ ಪ್ರಯತ್ನಿಸುತ್ತಿರುವ ಜಾಗಗಳನ್ನು ಶಾಶ್ವತವಾಗಿ ಬಿಟ್ಟು ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸಬೇಕೆಂದು ಸರ್ಕಾರದ ಮುಂದೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article