ಕುಕುನೂರು04: ೨೦೨೪ರ ಲೋಕಸಭಾ ಚುನಾವಣೆಯಲ್ಲಿ ರೈತರ ಹಿತ ಕಾಯುವಂತಹ ಯೋಗ್ಯವಾದ ಪಕ್ಷವನ್ನು ಬೆಂಬಲಿಸಬೇಕೆAದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರಾಜ್ಯಾಧ್ಯಕ್ಷ ವಿ.ಆರ್ ನಾರಾಯಣರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ ೨೫ ಸಂಸದರು ಇದ್ದರು ಸಹ ಒಂದು ದಿನ ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ರೈತರ ಸಾಲಮನ್ನಾ ಮಾಡಲು ಆಗ್ರಹ ಮಾಡಲಿಲ್ಲ. ಬೆಳೆ ಪರಿಹಾರವನ್ನು ನೀಡಲಿಲ್ಲ. ಮೋದಿ ಸರಕಾರದಲ್ಲಿ ಸಾವಿರಾರು ರೈತರು ದಿಲ್ಲಿಯ ಶಂಭು ಗಡಿಯಲ್ಲಿ ಕಳೇದ ಅನೇಕ ತಿಂಗಳಿAದ ಹೋರಾಟವನ್ನು ಮಾಡುತ್ತೀದ್ದಾರೆ ಇದರ ಬಗ್ಗೆ ಕೇಂದ್ರ ಸರಕಾರ ಗಮನಹರಿಸುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಬರಗಾಲ ಆವರಿಸಿದೆ. ರೈತರ ಸಾಲ ಮನ್ನಾ ಮಾಡಿಲ್ಲ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಪಕ್ಷಕ್ಕೆ ಬೆಂಬಲಿಸಬೇಕಿದೆ.
೧೦ ವರ್ಷದಲ್ಲಿ ಮೋದಿ ಸರಕಾರ ಏನು ಮಾಡಿದೆ ಎಂದು ನೋಡಿದ್ದೆವೆ. ೨ ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು ಉದ್ಯೋಗ ಕೊಡಲಿಲ್ಲ. ಬೆಳೆ ನಾಶ ಪರಿಹಾರ, ನಷ್ಟ ಪರಿಹಾರವನ್ನು ಕೇಂದ್ರ ಸರಕಾರ ನೀಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಯೋಜನೆ ಮಾಡುತ್ತೇವೆ ಎಂದು ಘೋಷಣೆ ಮಾಡಿಕೊಂಡಿದೆ. ಅಲ್ಲದೆ ಈ ಹಿಂದೆ ಡ್ಯಾಂಗಳನ್ನು ಕಟ್ಟಿಸಿದೆ. ನೀರಾವರಿ ಯೋಜನೆ ಜಾರಿಗೆ ತಂದಿದೆ. ಕಾರಣ ರೈತರ ಪರ ಯೋಜನೆಗಳನ್ನು ಹಮ್ಮಿಕೊಂಡಿರುವ ಪಕ್ಷಕ್ಕೆ ಬೆಂಬಲಿಸುವ ಅಗತ್ಯತೆ ಇದೆ ಎಂದರು. ಮೋದಿ ಸರಕಾರದಲ್ಲಿ ರೈತರು ತಮ್ಮ ಹಕ್ಕನ್ನು ಕೇಳುವಕ್ಕೂ ಆಗುತಿಲ್ಲ, ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವಾ ಇಲ್ಲವಾ. ರೈತರಿಗೆ ಪೇನ್ಸನ್ ನೀಡಬೇಕು. ಹೋರಾಟ ಮಾಡುವದಕ್ಕೆ ಹೋದರೆ ನಮ್ಮನ್ನ ಪೋಲಿಸ್ನವರು ಆರೇಷ್ಟ್ ಮಾಡಿ, ಕೆಸ್ಗಳನ್ನು ಹಾಕುತ್ತಾರೆ.
ಬಿಜೆಪಿ ಕಳೇದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸರಕಾರ ರೈತರ ಪರವಾದ ಸ್ವಾಮಿನಾಥ್ ವರದಿ ಜಾರಿಗೆ ತರುತ್ತೇವೆ ಎಂದು ಘೋಷಣೆ ಮಾಡುತ್ತೇವೆ ಎಂದು ರೈತರಿಂದ ಮತವನ್ನು ಪಡೆದು ಅಧಿಕಾರಕ್ಕೆ ಬಂದಿತ್ತು. ಸ್ವಾಮೀನಾಥನ್ ವರದಿಯನ್ನು ಜಾರಿ ಮಾಡಲಿಲ್ಲ ಬರಿ ಸುಳ್ಳು ಹೇಳುವದನ್ನು ಕೇಂದ್ರ ಸರಕಾರ ಬಿಡಬೇಕು. ಕೇಂದ್ರ ಸರಕಾರ ರೈತರಿಗೆ ಮೋಸ ಮಾಡಿದೆ. ರೈತರಿಗೆ ಯೋಗ್ಯವಾದ ಪಕ್ಷಕ್ಕೆ ಬೆಂಬಲಿಸಬೇಕಿದೆ ಎಂದರು.
ಬಾಗೇಪಲ್ಲಿ ಅಧ್ಯಕ್ಷ ಗೋವಿಂಧರೆಡ್ಡಿ, ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ಪ್ರಮುಖರಾದ ಕಳಕಪ್ಪ ಕ್ಯಾದಗುಂಪಿ, ಲಕ್ಷ್ಮಣ ಕೋರಿ, ಹನುಮೇಶ, ಸಿ.ನಾರಾಯಣ, ರವಿ ಶೆಲ್ಯೂಡಿ, ನಾಗಪ್ಪ ಗಡಾದ್, ಸಾವಿತ್ರಮ್ಮ, ಗಂಗಮ್ಮ ಹುಡೇದ್, ಬಸಪ್ಪ ಮಂಡಲಗೇರಿ, ಗವಿಸಿದ್ದಪ್ಪ ಜೀನಿನ್, ಶರಣಯ್ಯ ಕೋಮಾರ ಇತರರಿದ್ದರು.