ಬಿಜೆಪಿ ಗದಗ ಜಿಲ್ಲಾ, ನಗರ ಮಂಡಲ ವತಿಯಿಂದ ತುರ್ತು ಪರಿಸ್ಥಿತಿ ದಿನವನ್ನು ಆಚರಿಸಲಾಯಿತು

Ravi Talawar
ಬಿಜೆಪಿ ಗದಗ ಜಿಲ್ಲಾ, ನಗರ ಮಂಡಲ ವತಿಯಿಂದ ತುರ್ತು ಪರಿಸ್ಥಿತಿ ದಿನವನ್ನು  ಆಚರಿಸಲಾಯಿತು
WhatsApp Group Join Now
Telegram Group Join Now

ಗದಗ- ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಹಾಗು ನಗರ ಮಂಡಲ ವತಿಯಿಂದ ಜೂನ್ ೨೫ ರಂದು ತುರ್ತು ಪರಿಸ್ಥಿತಿ ಇಂದಿಗೆ ೫೦ ವರ್ಷ ಗತಿಸಿತು. ಬಿಜೆಪಿಯ ಜಿಲ್ಲಾಧ್ಯಕ್ಷರು ಹಾಗು ನಗರ ಅಧ್ಯಕ್ಷರ ನೇತೃತ್ವದಲ್ಲಿ ಅಂದಿನ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾದ ಶ್ರೀ ಕೃಷ್ಣಾ ಪಿ. ಹೊಂಬಾಳಿ ಯವರ
ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿ ಕರಾಳ ದಿನವನ್ನು ನೆನಪಿಸುವ ಕಾರ್ಯವನ್ನು ಮಾಡಿದರು.

ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನದ ನೆನಪುಗಳನ್ನ ಪ್ರಮುಖರಾದ ನಾಗರಾಜ ಕುಲಕರ್ಣಿ, ಜಗನ್ನಾಥಸಾ ಭಾಂಡಗೆ, ಬಿ.ಎಚ್.ಲದ್ವಾ ಅವರು ಕೃಷ್ಣಾ  ಹೊಂಬಾಳಿಯವರ ಅಂದಿನ ದಿನಗಳನ್ನ ಎಳೆ, ಎಳೆಯಾಗಿ ನಮ್ಮೆಲ್ಲರಿಗೂ ತಿಳಿಸುವ ಮಾತುಗಳನ್ನು ವಿಸ್ತೃತವಾಗಿ ತಿಳಿಸಿಕೊಟ್ಟರು.

ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ ಮಾತನಾಡಿ ಕರಾಳ ದಿನವನ್ನು ಬಿಜೆಪಿ ರಾಜ್ಯ ಅಧ್ಯಕ್ಷರ ಆದೇಶದ ಮೇರೆಗೆ ನಮ್ಮ ಜಿಲ್ಲೆಯ ೯ ಮಂಡಲಗಳಲ್ಲಿ ಅಂದಿನ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾದ ವ್ಯಕ್ತಿಗಳ ಮನೆಗೆ ತೆರಳಿ ಅವರನ್ನು ಗೌರವಿಸುವುದರ ಮೂಲಕ ಅವರ ಅನುಭವವನ್ನು ನಮ್ಮೆಲ್ಲ ಬಿಜೆಪಿ ಕಾರ್ಯಕರ್ತರಿಗೆ ತಿಳಿಸುವಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಜಿಲ್ಲಾಧ್ಯಕ್ಷರು ಗದಗ ನಗರದ ಕೃಷ್ಣಾ ಹೊಂಬಾಳಿರವರ ಮನೆಯಲ್ಲಿ ಅವರನ್ನು ಗದಗ ನಗರ ಮಂಡಲ ಬಿಜೆಪಿ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರೊಂದಿಗೆ ಅವರ ಅನುಭವವನ್ನು ಹಂಚಿಕೊಂಡು ಈ ದಿನವನ್ನು ಭಾರತದಲ್ಲಿ
ಎಂದಿಗೂ ಮರೆಯಲಾಗದ ಕರಾಳ ದಿನವೆಂದು ಮಾತನಾಡಿದರು.

ಈ ಸಂದರ್ಭದಲ್ಲಿ ನಗರದ ಅಧ್ಯಕ್ಷರಾದ ಅನೀಲ ಅಬ್ಬಿಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ನಗರಸಭಾ ಸದಸ್ಯರಾದ ಮುತ್ತು ಮುಶಿಗೇರಿ, ಶಂಕರ ಕಾಕಿ, ಅಶೋಕ ಸಂಕಣ್ಣವರ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ವೆಂಕಟೇಶ ಹಬೀಬ, ಬಸವರಾಜ ಶಿರಿ, ದೇವಪ್ಪ ಗೊಟೂರ, ಸುರೇಶ ಚಿತ್ತರಗಿ, ಮಹೇಶ ಕೋಟಿ, ಶೈಲೇಶ ಬಾಗಮರ, ಕಮಲೇಶ ಜೈನ್, ಅಶ್ವೀನಿ ಜಗತಾಪ್, ವಿಜಯಲಕ್ಷ್ಮೀ ಮಾನ್ವಿ, ಪದ್ಮೀನಿ ಮುತ್ತಲದಿನ್ನಿ, ರತ್ನಾ ಕುರಗೋಡ, ಜಯಶ್ರೀ ಅಣ್ಣಿಗೇರಿ, ಶೃತಿ ಮುಶಿಗೇರಿ, ಮಾಂತೇಶ ಬಾತಾಖಾನಿ, ಮಂಜುನಾಥ ಶಾಂತಗೇರಿ, ರಾಜು ಉಮಚಗಿ, ಶಶಿಧರ, ಅವಿನಾಶ ಹೊನಗುಡಿ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು
ಉಪಸ್ಥೀತರಿದ್ದರು.

WhatsApp Group Join Now
Telegram Group Join Now
Share This Article