ಬಾಗಲಕೊಟೆ: ಬಿ.ವಿ.ವಿ.ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಶೋಧನಾ ವಿಧಾನ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಇದೆ ಜುಲೈ ೪ ಗುರುವಾರ ಬೆಳಿಗ್ಗೆ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಲಿದೆ.
ಸಂಪನ್ನೂಲವ್ಯಕ್ತಿಗಾಳಾಗಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗಣೀತ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಸುನೀಲಕುಮಾರ ಹೊಸಮನಿ ಅವರು ರಸಾಯನಶಾಸ್ತ್ರ ಮತ್ತು ಬೌತಶಾಸ್ತ್ರದ ಮೇಲಿನ ಗ್ರಾಪ್ ಸಿದ್ದಾಂತದ ಮಹತ್ವ ಮತ್ತು ಸಂಶೋಧನಾ ವಿಧಾನಗಳ ಬಗ್ಗೆ ಮಾತನಾಡಲಿದ್ದಾರೆ.
ಇನ್ನೋರ್ವ ಸಂಪನ್ನೂಲ ವ್ಯಕ್ತಿಗಳಾದ ಬಸವೇಶ್ವರ ಇಂಜಿನಿಯರಿಂಗ್ ಮಹಾವಿದ್ಯಾಲಯದ ಗ್ರಂಥಪಾಲಕರಾದ ಡಾ. ಶ್ರೀಕಾಂತ ಕಾರ್ಕೂನ
ಅವರು ಶೈಕ್ಷಣಿಕ ಸಮಗ್ರತೆಗಾಗಿ ಕೌಶಲ್ಯಗಲು ಮತ್ತು ಸಂಶೋಧನಾ ವಿಧಾನಗಳ ಬಗ್ಗೆ ಉಪನ್ಯಾಸ ನೀಡಲಿದ್ದು, ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ್ ವಹಿಸಿಲಿದ್ದು, ಕಾರ್ಯಕ್ರಮ ಸಂಯೋಜಕಿ ಡಾ. ಎಸ್.ಆರ. ಕಲಾದಗಿ. ಐಕ್ಯೂಎಸಿ ಸಂಯೋಜಕ
ಡಾ.ಡಿ.ಎಸ್.ಲಮಾಣಿ ಉಪಸ್ಥಿತರಿರುವರು,ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.