ಮಾನವೀಯತೆ ಬಿಟ್ಟು ಸಾಹಿತ್ಯವೇ ಇಲ್ಲ : ಪ್ರೊ. ಬಿ.ಎಲ್. ಲಕ್ಕಣ್ಣವರ

Pratibha Boi
ಮಾನವೀಯತೆ ಬಿಟ್ಟು ಸಾಹಿತ್ಯವೇ ಇಲ್ಲ : ಪ್ರೊ. ಬಿ.ಎಲ್. ಲಕ್ಕಣ್ಣವರ
WhatsApp Group Join Now
Telegram Group Join Now
ಕಾಗವಾಡ: ಶಿವಾನಂದ ಮಹಾವಿದ್ಯಾಲಯದಲ್ಲಿ ರಾಷ್ಟçಮಟ್ಟದ ವಿಚಾರ ಸಂಕಿರಣ ಶರಣ ಸಾಹಿತ್ಯದಲ್ಲಿ ಮಾನವೀಯ ಚಿಂತನೆಗಳಿವೆ. ಮಾನವೀಯತೆ ಬಿಟ್ಟು ಸಾಹಿತ್ಯವೇ ಇಲ್ಲ. ಸಾಹಿತ್ಯದ ಮೂಲ ಉದ್ದೇಶ ಸಮಾಜದಲ್ಲಿ ಅಸಮಾನತೆ, ಮೂಢನಂಬಿಕೆಗಳನ್ನು ಹೋಗಲಾಡಿಸುವುದಾಗಿದೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಬಿ.ಎಲ್. ಲಕ್ಕಣ್ಣವರ ಅಭಿಪ್ರಾಯಿಸಿದರು. ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ, ಮುಂಡರಗಿ ಶ್ರೀ ಜಗದ್ಗುರು ಅಣ್ಣದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠ ಹಾಗೂ ಶಿವಾನಂದ ಮಹಾವಿದ್ಯಾಲಯ, ಕಾಗವಾಡ ಇವರ ಸಂಯುಕ್ತಾಶ್ರಯದಲ್ಲಿ “ಶರಣ ಸಾಹಿತ್ಯದಲ್ಲಿ ಮಾನವೀಯ ಚಿಂತನೆ” ವಿಷಯದ ಮೇಲೆ ಹಮ್ಮಿಕೊಂಡ ಒಂದು ದಿನದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
 ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯರಾದ ಡಾ. ಎಸ್.ಪಿ. ತಳವಾರ ಮಾತನಾಡುತ್ತ ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳಿಗೆ ಉಪಯುಕ್ತ. ಶರಣರ ವಿಚಾರಗಳು ನಮ್ಮ ಜೀವನದ ಅಂಕು-ಡೊAಕುಗಳನ್ನು ಸುಧಾರಿಸಲು ಸಹಕಾರಿಯಾಗಿವೆ. ಶರಣರ ಸಾಹಿತ್ಯವನ್ನು ನಾವು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ ಎಂದರು. ಮುಂಡರಗಿ ಶ್ರೀ ಜಗದ್ಗುರು ಅಣ್ಣದಾನೀಶ್ವರ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ. ಮಹೇಶ ಚಿಂತಾಮಣಿ ಪ್ರಾಸ್ತಾವಿಕ ಮಾತನಾಡುತ್ತ ಭಾರತಿಯ ಸಂಸ್ಕೃತಿ ಸಮೃದ್ಧವಾಗಿದ್ದು, ಇಲ್ಲಿಯ ಶರಣ ಸಾಹಿತ್ಯದಲ್ಲಿ ಶರಣರ ಕೊಡುಗೆ ಅಪಾರವಾಗಿದೆ ಎಂದರು.
 ಮಹಾವಿದ್ಯಾಲಯದ ಆಡಳಿತಾಧಿಕಾರಿಗಳಾದ ಮೇಜರ ವ್ಹಿ.ಎಸ್. ತುಗಶೆಟ್ಟಿ ತಮ್ಮ ಅಭಿಪ್ರಾಯ ಹಂಚುತ್ತ ಇದು ಮಹಾನ್ ಸಂತರು ಸ್ಥಾಪಿಸಿದ ಮಹಾವಿದ್ಯಾಲಯ. ಇವತ್ತಿನ ತಾಂತ್ರಿಕ ಜಗತ್ತಿನಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳು ನಾಶವಾಗುತ್ತಿವೆ, ಇವುಗಳನ್ನು ನಾವು ವಚನಗಳ ಮೂಲಕ ಸುಧಾರಣೆ ಮಾಡಬೇಕಾಗಿದೆ ಎಂದರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಬಿ.ಎ. ಪಾಟೀಲ ವಿಚಾರ ಸಂಕಿರಣಕ್ಕೆ ಶುಭ ಹಾರೈಸಿದರು.
 ವಿಚಾರ ಸಂಕಿರಣದಲ್ಲಿ ಗೀತಾಶ್ರಮ ಸದಲಗಾದ ಪೀಠಾಧಿಶರಾದ ಪ.ಪೂ. ಶ್ರೀ ಶ್ರದ್ಧಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ವಿದ್ಯಾರ್ಥಿಗಳು ಪ್ರತಿ ಕ್ಷಣವನ್ನು ಅಮೃತದಂತೆ ಬಳಸಬೇಕು. ಮಾತಿಗಿಂತ ಕೃತಿ ಮುಖ್ಯ, ಶರಣರ ಸಾಹಿತ್ಯ ದೈವಿ ಆಧ್ಯಾತ್ಮಿಕ ಮೌಲ್ಯಗಳನ್ನು ಒಳಗೊಂಡಿದ್ದು ನಾವೆಲ್ಲರೂ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕಾಗಿದೆ ಎಂದರು.
 ಪ್ರಾರಂಭದಲ್ಲಿ ಅನನ್ಯಾ ಕುಲಕರ್ಣಿ ವಚನಗೀತೆ ಹಾಡಿದರು. ಕುಮಾರಿ ಶ್ರೇಯಾ ಸಾಂಗವಾಡೆ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಐಕ್ಯೂಎಸಿ ಸಂಯೋಜಕರಾದ ಪ್ರೊ. ಬಿ.ಡಿ. ಧಾಮಣ್ಣವರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎ.ಎಂ. ಜಕ್ಕಣ್ಣವರ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವ್ಹಿ.ಬಿ. ಬುರ್ಲೆ ಹಾಗೂ ಪ್ರೊ. ಎನ್.ಎಂ. ಬಾಗೆವಾಡಿ ಕಾರ್ಯಕ್ರಮ ನಿರೂಪಿಸಿದರು. ಎರಡು ಪ್ರಮುಖ ಗೋಷ್ಠಿಗಳು ನಡೆದಿದ್ದು ಮೊದಲನೇ ಗೋಷ್ಠಿಯಲ್ಲಿ ವಚನಕಾರರ ಮಾನವೀಯ ಚಿಂತನೆ ಕುರಿತು ವಿಜಯಪುರದ ಹಿರಿಯ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಮೇತ್ರಿ ಮತ್ತು ವಚನಕಾರರ ಮಾನವೀಯ ಚಿಂತನೆ ಕುರಿತು ಜಮಖಂಡಿಯ ಪ್ರಾಧ್ಯಾಪಕರಾದ ಡಾ. ವೈ.ವೈ. ಕೊಕ್ಕನವರ ಉಪನ್ಯಾಸ ನೀಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಕಾಗವಾಡದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಎಂ.ಬಿ. ಹೂಗಾರ ವಹಿಸಿಕೊಂಡಿದ್ದರು.
 ಎರಡನೇ ಗೋಷ್ಠಿಯಲ್ಲಿ ಹರಿಹರಣ ಸಾಹಿತ್ಯದಲ್ಲಿ ಮಾನವೀಯ ಚಿಂತನೆ ಕುರಿತು ಕುಪ್ಪಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ.ಎಸ್. ದುರ್ಗಾಪ್ರವೀಣ ಉಪನ್ಯಾಸ ನೀಡಿದರು. ಷಟ್ಪದಿ ಕಾವ್ಯಗಳಲ್ಲಿ ಮಾನವೀಯ ಚಿಂತನೆ ಕುರಿತು ಹಾರೂಗೇರಿಯ ನಿವೃತ್ತ ಪ್ರಾಧ್ಯಾಪಕರಾದ ಡಾ. ವ್ಹಿ.ಎಸ್. ಮಾಳಿ ಉಪನ್ಯಾಸ ನೀಡಿದರು. ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ. ನಾಗರಾಜ ಅಧ್ಯಕ್ಷತೆಯನ್ನು ವಹಿಸಿದ್ದರು.
 ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಥಣಿಯ ಹಿರಿಯ ಸಾಹಿತಿಗಳು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬಾಳಾಸಾಹೇಬ ಲೋಕಾಪುರ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ವಿಚಾರ ಸಂಕಿರಣವು ತನ್ನದೇ ಆದ ವೈಶಿಷ್ಠತೆಯನ್ನು ಹೊಂದಿದ್ದು ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಶರಣ ಸಾಹಿತ್ಯವನ್ನು ಓದಿ ಅನುಕರಿಸಬೇಕಾಗಿದೆ ಎಂದರು. ವಿಚಾರ ಸಂಕಿರಣದಲ್ಲಿ ನಾಡಿನ ಹಿರಿಯ-ಕಿರಿಯ ಸಂಶೋಧನಾ ಆಸಕ್ತರು, ಪ್ರಾಧ್ಯಾಪಕರು, ವಿದ್ಯಾಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಭಿಜಾತ ಕನ್ನಡ ದ್ವೆöÊಮಾಸಿಕ ಪತ್ರಿಕೆಯ ಸಹಭಾಗಿತ್ವದಲ್ಲಿ ವಿಚಾರ ಸಂಕಿರಣದ ಪುಸ್ತಕವನ್ನು ಪ್ರಕಟಿಸಲಾಯಿತು. ಸಮಾರೋಪ ಸಮಾರಂಭವನ್ನು ಪ್ರೊ. ಎಸ್.ಎಸ್. ಫಡತರೆ ನಿರೂಪಿಸಿದರು.
WhatsApp Group Join Now
Telegram Group Join Now
Share This Article