ಕೊಪ್ಪಳ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ವಿಜಯನಗರ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು.
ರಾತ್ರಿಯೆಲ್ಲ ಮಳೆ ಸುರಿದು ಕ್ರೀಡಾಂಗಣ ಒದ್ದೆಯಾಗಿದ್ದರಿಂದ ಪಂದ್ಯಗಳು ತಡವಾಗಿ ಆರಂಭಗೊಂಡವು ಇದರ ನಡುವೆಯೂ ಕೊಪ್ಪಳದ ಬ್ಲೂಸ್ಟಾರ್ ತಂಡ ಹಾಗೂ ದಾವಣಗೆರೆ ಕ್ಲಾಸಿಕ ತಂಡದ ಪಂದ್ಯಾವಳಿ ರೋಚಕವಾಗಿ ನಡೆದು ಕೊನೆಗೆ ದಾವಣಗೆರೆ ಕ್ಲಾಸಿಕ ತಂಡವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
ಕೊನೆಯ ಫೈನಲ್ ಪಂದ್ಯದಲ್ಲಿ 31-35 ಅಂಕಗಳ ಅಂತರದಲ್ಲಿ ಬೆಂಗಳೂರಿನ ಚಿನ್ಮಯಿ ಕ್ಲಬ್ ತಂಡದ ಎದುರು ವಿಜಯನಗರ ತಂಡವು ಗೆಲುವಿನ ಕೇಕೆ ಹಾಕಿತು ಎರಡನೇ ಹಂತದ ಪಂದ್ಯದಲ್ಲಿ ಬೆಂಗಳೂರಿನ ಆರ್ .ಆರ್ ನಗರದ ತಂಡವು ದಾವಣಗೆರೆ ಕ್ಲಾಸಿಕ ತಂಡದ ಎದುರು 29-25 ಅಂಕಗಳಿಂದ ಮಣಿಸಿ ಮೂರನೇ ಸ್ಥಾನ ಪಡೆದುಕೊಂಡಿತು.
ದಾವಣಗೆರೆ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ನಾಲ್ಕು ತಂಡಗಳಿಗೂ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠಲ್ ಜಾಬಗೌಡರ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಬ್ಲೂಸ್ಟಾರ್ ಅಸೋಶಿಯೇಷನ್ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ ಹೆಬ್ಬಾಳ,ಜಿಲ್ಲಾ ಉಪಾಧ್ಯಕ್ಷ ಪ್ರಭು ನಿಡಶೇಸಿ, ತಾಲೂಕು ಅಧ್ಯಕ್ಷರಾದ ಐ. ಎಸ್ . ಬೊಮ್ಮನಾಳ,ಕಾರ್ಯದರ್ಶಿ ಸಿದ್ದು ಬುಳ್ಳಾ ಪದಾಧಿಕಾರಿಗಳಾದ ಗ್ಯಾನಚಂದ ಜಾಂಗಡಾ,ಗವಿ ಬಿನ್ನಾಳ,ನಾಗರಾಜ ಬಳ್ಳಾಬಳ್ಳಿ, ವೆಂಕಟೇಶ ಭೋಸ್ಲೆ ಹಿರಿಯ ಆಟಗಾರರಾದ ಸಿದ್ದಣ್ಣ ನಾಲವಾಡ,ಕೆ.ಸಿ.ಶಾಸ್ತ್ರಿ,ವೀರಣ್ಣ ನಾಲವಾಡ,ಕೃಷ್ಣ ಇಟ್ಟಂಗಿ ಇನ್ನಿತರ ಆಟಗಾರರು ಉಪಸ್ಥಿತರಿದ್ದರು.