ಧಾರವಾಡ: ಮಹಾದಾಯಿ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಗೋವಾ ಸರ್ಕಾರದ ವಿರುದ್ಧ ಮಹಾದಾಯಿಗಾಗಿ ಮಹಾವೇದಿಕೆ ಸಂಚಾಲಕ ಶಂಕರ ಅಂಬಲಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕರ್ನಾಟಕಕ್ಕೆ ನೀರು ಕೊಡಬಾರದು ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರಸಿಂಗ್ ಅವರಿಗೆ ಮನವಿ ಮಾಡಿರುವ ಕುರಿತು ಹೇಳಿದ್ದಾರೆ. ಮಹಾದಾಯಿ ಯೋಜನೆ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಇದೆ ವೇಳೆ ಶಂಕರ ಅಂಬಲಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಂಕರ ಅಂಬಲಿ. ಶಂಕರಗೌಡ ಪಾಟೀಲ.ಬಾಲಚಂದ್ರ ಸುರಕೋಡ.ಲಕ್ಷ್ಮಣ ಬಕ್ಕಾಯಿ.ಪ್ರವೀಣ ಯರಗಟ್ಟಿ. ಉಪಸ್ಥಿತರಿದ್ದರು