ಮೂರು ವರ್ಗವನ್ನು ಮಾಡುವುದಕ್ಕೆ ಸಚಿವ ಸಂಪುಟ ನಿರ್ಧಾರ
ಬೆಂಗಳೂರು: ಒಳಮಿಸಲಾತಿ ಬಗ್ಗೆ ಇಂದು ನಡೆದ ಸಚಿವ ಸಂಪುಟ ಸಭೆ ಬಹಳಷ್ಟು ಚರ್ಚೆ ಬಳಿಕ ಹೂಸ ಸೂತ್ರ ಕಂಡುಕೊಂಡಿದ್ದಾರೆ.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಕಳೆದ ಐದು ದಶಕದ ಕನಸು ನನಸಾಗಿದೆ. ಸದ್ಯದ ಮಾಹಿತಿ ಪ್ರಕಾರ ಐದು ಗುಂಪುಗಳ ಬದಲಾಗಿ ಮೂರು ವರ್ಗವನ್ನು ಮಾಡುವುದಕ್ಕೆ ಸಚಿವ ಸಂಪುಟ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಇದಲ್ಲದೇ ಎಡಕ್ಕೆ ಆರು, ಬಲಗೈಗೆ ಆರು. ಇತರರಿಗೆ ನಾಲ್ಕು ಮೀಸಲಾತಿ ನೀಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ನಾಗಮೋಹನ್ ಅವರ ವರದಿಯಲ್ಲಿ ಐದು ಗುಂಪುಗಳನ್ನು ವಿಂಗಡನೆ ಮಾಡಲಾಗಿತ್ತು.
ಪರಿಶಿಷ್ಟ ಕುಟುಂಬಗಳ ದತ್ತಾಂಶ ಸಂಗ್ರಹಿಸಲು ರಾಜ್ಯದಾದ್ಯಂತ ಮೇ 5ರಿಂದ ವಿವಿಧ ಹಂತಗಳಲ್ಲಿ ‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ’ ನಡೆದಿತ್ತು ಅದರಂತೆ ಆಗಸ್ಟ್ 3, 2025 ರಂದು ಪರಿಶಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ಎಚ್.ಎನ್. ನಾಗಮೋಹನ್‌ದಾಸ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ವರದಿಯನ್ನು ಸಲ್ಲಿಸಿದ್ದರು.
ವರದಿ ಸಲ್ಲಿಕೆ ಬಳಿಕ ಸೇರಿದದ್ದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಭೆ ಸೇರುವುದಕ್ಕೆ ಸಚಿವ ಸಂಪುಟ ಸಂಪುಟ ನಿರ್ಧಾರ ಮಾಡಿತ್ತು, ಅದರಂತೆ ಇಂದು ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ ಎನ್ನಲಾಗಿದೆ. ಕೆಲವು ಮಂದಿ ಶಾಸಕರು ವರದಿಯನ್ನು ತಿರಸ್ಕಾರ ಮಾಡಿ ಮತ್ತೆ ಸರ್ವೆ ನಡೆಸುವುಂತೆ ಜೋರು ಧ್ವನಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಎರಡು ಕಡೆಯವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ. ಹಲವು ಸಮುದಾಯದವರು ಮೀಸಲಾತಿಯನ್ನು ಪಡೆದುಕೊಂಡು ಉನ್ನತ ಸ್ಥಾನಕ್ಕೆ ಹೋಗುತ್ತಿದ್ದಾರೆ. ಮೀಸಲಾತಿಯ ಲಾಭವನ್ನು ಒಂದೇ ವರ್ಗದವರು ಉಣ್ಣುತ್ತಿದ್ದಾರೆ ನೈಜ ದಲಿತರಿಗೆ ಸರಿಯಾಗಿ ಮೀಸಲಾತಿ ಸಿಗುತ್ತಿಲ್ಲ, ದಲಿತರಲ್ಲದವರು ಕೂಡ ಪ.ಜಾತಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ ಅಂತಹವರನ್ನು ಪ.ಜಾತಿಯಿಂದ ಕೈಬಿಡಬೇಕು ಅಂತ ಮೂಲ ದಲಿತರ ಕಳೆದ ಐದು ದಶಕಗಳಿಂದ ಹಲವು ರೀತಿಯ ಹೋರಾಟವನ್ನು ನಡೆಸುತ್ತಿದ್ದರು, ಅದರಂಥೆ ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಅಂದ ಹಾಗೇ ಸುಪ್ರಿಂಕೋರ್ಟ್ ಕೋರ್ಟ್ ಕೂಡ ಒಳಮೀಸಲಾತಿಯನ್ನು ಜಾರಿ ತರುವುದು ಆಯಾ ರಾಜ್ಯಗಳ ಕರ್ತವ್ಯ ಅಂತ ಹೇಳಿತ್ತು, ಆದಾದ ಬಳಿಕ ರಾಜ್ಯದಲ್ಲಿ ಒಳಮೀಸಲಾತಿಯ ಹೋರಾಟ ಇನ್ನೂ ಹೆಚ್ಚಾಗಿತ್ತು, ಇದಲ್ಲದೇ ಒಳಮೀಸಲಾತಿಯನ್ನು ಜಾರಿ ಮಾಡದೇ ಯಾವುದೇ ಸರ್ಕಾರಿ ನೇಮಕಾತಿಯನ್ನು ಮಾಡಿಕೊಂಡಿರಲಿಲ್ಲ. ಈಗ ಒಳಮೀಸಲಾತಿ ಜಾರಿಗೆ ತಂದಿರುವುದರಿಂದ ಇನ್ನೊಂದು ತಿಂಗಳಿನಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದ್ದಗಳ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
****