ಮುಗಳಖೋಡ 04:೪)(೨) ಎರಡು ರಾಷ್ಟ್ರೀಯ ಪಕ್ಷಗಳು ರೈತ ಹಾಗೂ ರೈತ ಕೂಲಿ ಕಾರ್ಮಿಕರಿಗೆ ಯಾವುದೇ ರೀತಿಯಲ್ಲೂ ಪ್ರಗತಿಪರ ಚಿಂತನೆ ನಡೆಸದೆ ಅವರ ಬೇಕು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಧರಣಿ ಹೋರಾಟ ನಡೆಸಿದರು ಸ್ಪಂದಿಸದೆ ಇವೆ ಎಂದು ಚೊನ್ನಪ ಪೂಜೆರಿ ಹೇಳಿದರು.ಅವರು ಶುಕ್ರವಾರ ದಂದು ಪಟ್ಟಣದ ಸಮೀಪ ಕಂಕಣವಾಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಸಭೆಯಲ್ಲಿ ರೈತನೆ ರಾಷ್ಟ್ರದ ಬೆನ್ನೆಲುಬು ಎಂದು ಹೇಳುತ್ತಾ ,ಅವನ ಬೆನ್ನು ಸವರುತ್ತಾ,ಅವನ ಜೊತೆ ಕುಟುಂಬದ ಬೆನ್ನು ಮೂಳೆ ಮುರಿದು ಅವನು ಬೆವರು ಸುರಿಸಿ ದುಡಿದ ಅನ್ನವನ್ನು ತಿಂದು ವೈಭವದ ಜೀವನ ಕಳೆಯುವುದಲ್ಲದೆ ರೈತನನ್ನು ಸಾಲದ ಕೂಪದಲ್ಲಿ ಮುಳುಗಿಸಿ ಐಷಾರಾಮಿ ಜೀವನ ಕಳೆಯುವ ನೀಚ ನಾಯಕರಿಗೆ ಪಾಠ ಕಲಿಸಲು, ರಾಷ್ಟ್ರದ ಉನ್ನತಿಗಾಗಿ ಸೇವೆ ಸಲ್ಲಿಸಿ ಕಡು ಬಡವರ ರೈತರ ದೀನ ದಲಿತರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಸೇವಾ ನಿವೃತ್ತಿ ನೀಡಿ, ಜನ ಪರ ಸಕ್ರೀಯ ಚಿಂತನೆ ಹೊಂದಿರುವ, ಪಕ್ಷೇತರ ಅಭ್ಯರ್ಥಿ ಸಂಭು ಕಲ್ಲೋಳ್ಳಿಕರು ನಾನು ನಿಮ್ಮ ಸೇವೆಗೆ ಜೀವನ ಮುಡಿಪಾಗಿಟ್ಟು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಪ್ರಾಮಾಣಿಕ ಸೇವೆ ಮಾಡುತ್ತೇನೆ ನನಗೆ ನಿಮ್ಮ ಬೆಂಬಲ ಮುಖ್ಯ ಎಂದು ವಿನಂತಿಸಿದರು.ಇವರ ಮಾನವೀಯ ಕಾಳಜಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಲ್ಲ ಪದಾಧಿಕಾರಿಗಳು ಚರ್ಚಿಸಿ ಕಲ್ಲೋಳ್ಳಿಕರನ್ನು ಬೆಂಬಲಿಸುವುದಲ್ಲದೆ ಆಯ್ಕೆಯೇ ನಮ್ಮ ನಡೆ ಎಂದು ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿ ಶಂಭು ಕಲ್ಲೋಳ್ಳಿಕರವರಿಗೆ ರೈತ ಶಾಲು ಹೊದಿಸಿ ಗೌರವಿಸಿ ನಮ್ಮ ನಡೆ ಮತದಾರರ ಮನ ಒಲಿಸಿ ರೈತ ಸೇವಕನಿಗೆ ಜಯದಮಾಲೆ ಪಡೆಯುವ ಕಡೆ ಎಂದು ಪದಾಧಿಕಾರಿಗಳು ಜಯಘೋಷ ಹಾಕಿದರು.
ರಾಜ್ಯ ಕಾರ್ಯದರ್ಶಿ ರಾಜು ಪವಾರ್, ಕಾರ್ಯದರ್ಶಿ ,ಪ್ರಕಾಶ್ ನಾಯಕ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅಂಗಡಿ .ವಿವೇಕಾನಂದ ಘಂಟಿ ಚಿಕ್ಕೋಡಿ ಜಿಲ್ಲಾ ಕಾರ್ಯಧ್ಯಕ್ಷ ಮಾದೇವ ಹೋಳ್ಕರ ರಾಯಬಾಗ ತಾಲೂಕ ಅಧ್ಯಕ್ಷರು,ಕಲಗೌಡ ಪಾಟೀಲ,ಕಿಸಾನ್ ನಂದಿ,ಆನಂದ್ ಪಚ್ಚಾಪೊರೆ ಚಿಕ್ಕೋಡಿ ತಾಲೂಕಾ ಅಧ್ಯಕ್ಷರು,ಸಂಜು ಹಾವನ್ನವರ್ ಹುಕ್ಕೇರಿ ತಾಲೂಕಾ ಅಧ್ಯಕ್ಷರು ಇನ್ನು ಹಲವಾರು ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಮುಗಳಖೋಡ (೪)(೨) ಪೋಟೋ WA0032.jpg ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳ್ಳಿಕರನ್ನು ಗೌರವಿಸಿ ಬೆಂಬಲಕ್ಕೆ ನಿಂತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.