ಬಳ್ಳಾರಿ : ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ವರ್ಗಾವಣೆ ಮತ್ತು ಇತರ ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳಲು ವಿಶೇಷವಾದ ಗ್ರಿವಿನ್ಸ್ ಸೆಲ್ ಆರಂಭಿಸಬೇಕೆಂದು ಬ್ಯಾಂಕಿನ ಪರಿಶಿಷ್ಟ ಜಾತಿ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ. ಪಿ ಬೊಮ್ಮಯ್ಯ ಬ್ಯಾಂಕಿನ ಜನರಲ್ ಮ್ಯಾನೇಜರ್ ಅವರನ್ನು ಒತ್ತಾಯಿಸಿದರು.
ಅವರು ಇಂದು ಗಾಂಧಿನಗರದಲ್ಲಿರುವ ಮುಖ್ಯ ಕಚೇರಿಯ ಹತ್ತಿರ ಒಂದು ದಿನದ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಸ್ಸಿ ಎಸ್ಟಿ ನೌಕರರ ಸಮಸ್ಯೆ ತಿಳಿಯಲು ಎಸ್ಸಿ ಎಸ್ಟಿ ಗ್ರಿವಿಯನ್ಸ್ ಸೆಲ್ ತೆರಬೇಕು ಮತ್ತು ಟ್ರಾನ್ಸಫರ್, ಪ್ರಮೋಷನ್, ಸಿನಿಯಾರಿಟಿ ಲಿಸ್ಟ್, ಡಿಸಿಪ್ಲೇನರಿ ಕೇಸ್ ನಲ್ಲಿ ಎಸ್ಸಿ ಎಸ್ಟಿ ನೌಕರರಿಗೆ ತಾರತಮ್ಯ ಮಾಡಲಾಗುತ್ತಿದೆ ಇದನ್ನು ಕೂಡಲೇ ಸರಿಪಡಿಸಬೇಕು,
ಎಸ್ಸಿ ಎಸ್ಟಿ ನೌಕರರಿಗೆ ಸೌಲಭ್ಯಗಳನ್ನು ನೀಡುವಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಡಳಿತ ಮಂಡಳಿ ವತಿಯಿಂದ ನಿರಂತರವಾಗಿ ತಾರತಮ್ಯ ಮಾಡಲಾಗುತ್ತಿದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳ ವಿರುದ್ಧ ಆರೋಪಿಸಿದರು.
ಈ ಮುಷ್ಕರದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ್, ಮಹಿಳಾ ಪ್ರತಿನಿಧಿ ಸೌಮ್ಯ ಪ್ರಸಾದ್ ಸೇರಿದಂತೆ ರಾಜ್ಯದ ಬ್ಯಾಂಕಿನ ಶಾಖೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ಇದ್ದರು