ನ್ಯೂಜ್ ಪೇಪರ ಡ್ರೆಸ್ ಗಮನಸೆಳೆದ ವಿದ್ಯಾರ್ಥಿನಿ ಶ್ರಿಶಾ

Pratibha Boi
ನ್ಯೂಜ್ ಪೇಪರ ಡ್ರೆಸ್ ಗಮನಸೆಳೆದ ವಿದ್ಯಾರ್ಥಿನಿ ಶ್ರಿಶಾ
WhatsApp Group Join Now
Telegram Group Join Now
ಜಮಖಂಡಿ: ಜಗತ್ತು ಒಂದು ವಿಸ್ಮಯ ಅದರಲ್ಲಿ ಟ್ರೆಂಡಗಳು ನವಮಯ. ಹೀಗಾಗಿ ಮಾಡೆಲ್ ಲೋಕದಲ್ಲಿಂದು ಆವಿಷ್ಕಾರದ ರಸಘಾಟದ ಚಿತ್ತಾರ ಮನೋಜ್ಞವಾಗಿ ಘಮಿಸುತ್ತಿವೆ. ಮೊಗಭಾವಗಳು ತನ್ಮಯವಾಗಿ ಮಿನುಗುತ್ತಿವೆ. ನವಮನ್ವಂತರದ ಹೊಸ ಟ್ರೆಂಡಗಳು ಬಣ್ಣದ ಲೋಕದಲ್ಲಿ ಕಲರಮಯವಾಗಿ ಜನಮನ ಸೆಳೆಯುತ್ತಿವೆ ಎಂಬುದಕ್ಕೆ ಚಿಗುರು ಕುಸುಮ ಬಾಲೆ ಧರಿಸಿರುವ ಉಡುಪು ವಿಭಿನ್ನವಾಗಿ ಗಮನ ಸೆಳೆದಿದೆ.
ಇಂಥದೊಂದು ವಿಶೇಷ ಬ್ರ್ಯಾಂಡ್ ಡ್ರೆಸ್ ಚಿತ್ತಾರದ ದೃಶ್ಯವೊಂದು ತಾಲೂಕಿನ ಕೃಷ್ಣಾನದಿ ತೀರದ ಚಿಕ್ಕಪಡಸಲಗಿ ಗ್ರಾಮದ ಶಾಲೆಯೊಂದರಲ್ಲಿ ನಡೆದ ಮಕ್ಕಳ ದಿನಾಚರಣೆ ಕರ್ಯಕ್ರಮದಲ್ಲಿ ಗಮನ ಸೆಳೆದಿದ್ದಾಳೆ ಆ ಪುಟ್ಟ ಬಾಲಕಿ.
ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಶ್ರಿಶಾ ಹತ್ತಳ್ಳಿ ಅವಳು ನ್ಯೂಸ್ ಪೇಪರ್ ಟ್ರೆಂಡ್ ನಲ್ ಅಂದಗೊಳಿಸಿ ಪಾಲಕರು ವಿಶೇಷತೆ ತೋರಿದ್ದಾರೆ. ಶ್ರಿಶಾ ನ್ಯೂಸ್ ಪೇಪರ್ ಉಡುಪು ಧರಿಸಿ ನಯವಾಗಿ ಮಿನುಗಿದ್ದಾಳೆ. ಈ ಹೊಸ ಟ್ರೆಂಡ್ ನವ್ಯತೆ ಭಾವ ಮೆಚ್ಚುಗೆಗೆ ಪಾತ್ರವಾಗಿದೆ. ನವ್ಯಂತರದ ಈ ಪೇಪರ್ ಸ್ಕ್ರಿಪ್ಟ್ ದ ಮೊನಚಿನಲ್ಲಿ ಸುದ್ದಿ ಹಾಳೆ ತುಂಡುಗಳ ಉಡುಪು ಧರಿಸಿ ಶ್ರಿಶಾ ಸಖತ್ ಗಮನ ಸೆಳೆದಿದ್ದಾಳೆ. ರಮ್ಯ, ನಮ್ಯ, ಗಮ್ಯ ಭಾವತನದಿಂದ ಡ್ರೆಸ್ ಟ್ರೆಂಡದ ನವ್ಯಕಾವ್ಯತನವನ್ನು ಸೃಜನಶೀಲತೆ ರೂಪಿಸಿಕೊಂಡು ಪ್ರೀತಿಗೆ ಪಾತ್ರರಾಗಿದ್ದಾಳೆ.
ಹೊಸತನದ ಫ್ಯಾನ್ಸಿಡ್ರೆಸ್ ಕಾಸ್ಟೂಮ್ ಯೋಚನೆ ಶಿಕ್ಷಕಿ ಸಹನಾ ಹತ್ತಳ್ಳಿ (ಕಲ್ಯಾಣಿ) ಅವರದ್ದು ಮಕ್ಕಳ ದಿನಾಚರಣೆ ಕರ್ಯಕ್ರಮದಲ್ಲಿ ಈ ಡ್ರೆಸ್ ನವ್ಯ ಭವ್ಯತೆ ನವೀನತೆಯಿಂದ ಕಂಡಿತು. ಶ್ರಿಶಾ ವೆಸ್ಟೇಜ್ ನ್ಯೂಸ್ ಪೇಪರಿನಲ್ಲಿ ಸಖತ್ ಮಿಂಚುವ ಮೂಲಕ ಗ್ರಾಮಸ್ಥರ ಗಮನ ಸೆಳದಿದ್ದಾಳೆ. ಪೇಪರ್ ಹಾಳೆಯ ಡ್ರೆಸದಲ್ಲಿ ಅಂದ ಚೆಂದದಿAದ ಗೋಚರಿಸುವ ಮೂಲಕ ಜನತೆಯ ಹೃದಯ ಗೆದ್ದಿದ್ದಾಳೆ ಈ ಶ್ರಿಶಾ ವಿದ್ಯಾರ್ಥಿನಿ.
ಶ್ರಿಶಾ ಎಲ್ಲರಿಂದಲೂ ಪ್ರಶಂಸೆ ಪಡೆದು ಖುಷಿಯಿಂದ ನಲಿದು ಕುಣಿದು ಕುಪ್ಪಳಿಸಿದ್ದಾಳೆ. ಸುಂದರ ಭಾವದ ಮೂಲಕ ನೋಡುವ ಕಂಗಳನ್ನು ಆಕರ್ಷಿಸಿದ್ದಾಳೆ. ಪೇಪರ್ ಉಡುಪುದೊಂದಿಗೆ ಚಿಕಿತಗೊಳಿಸಿರುವ ಈ ಬಾಲೆ ಶ್ರಿಶಾ ಅಪ್ಪಣ ಗ್ರಾಮೀಣ ಸೊಗಡಿನ ಮುಗ್ದ ಜೀವ. ಇವಳು ಶಾಲೆಯಲ್ಲಿ ಪ್ರತಿಭಾವಂತೆ. ಓದು, ಬರಹದಲ್ಲಿ ಆಸಕ್ತಿ ಹೊಂದಿದ್ದಾಳೆ. ಶ್ರಿಶಾ ಪ್ರಸ್ತುತ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಕನ್ನಡ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದಾಳೆ. ಪುಟ್ಟ ಮಗುವಿನ ಜ್ಞಾನ ಮಟ್ಟ ಅಗಾಧವಾಗಿದೆ. ನ್ಯೂಸ್ ಪೇಪರ್ ಉಡುಪು ಇದೀಗ ಇಲ್ಲಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿ ಚರ್ಚಿತಗೊಳ್ಳುತ್ತಿದೆ. ನ್ಯೂಸ್ ಪೇಪರ್ ಡ್ರೆಸ್ ಟ್ರೆಂಡದÀಲ್ಲಿ ಕಂಗೊಳಿಸಿ ಈಗ ನ್ಯೂಸ್ ಜಾಲದಲ್ಲಿ ಶ್ರಿಶಾ ಸುದ್ದಿಯಾಗುತ್ತಿದ್ದಾಳೆ.
WhatsApp Group Join Now
Telegram Group Join Now
Share This Article