ಸಿಂದಗಿ: ಮುಂದಿನ ದಿನಮಾನಗಳಲ್ಲಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಎಲ್ಲ ರೀತಿಯಲ್ಲಿ ಸಹಕರಿಸುತ್ತೇನೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ನಗರದ ತಹಶೀಲ್ದಾರ ಕಚೇರಿಯ ಮುಂಭಾಗದಲ್ಲಿರುವ ಶ್ರೀಘಾಳಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಕ್ತರ ಕಷ್ಟಗಳನ್ನು ನಿವಾರಿಸುವ, ಬೇಡಿದವರಿಗೆ ವರವ ನೀಡುತ ಜಗತ್ತ ಉದ್ದಾರಕ ಸಿಂದಗಿ ನಗರದ ಶ್ರೀಘಾಳಿ ಆಂಜನೇಯ ಸ್ವಾಮಿ ಜಯಂತಿಯಲ್ಲಿ ಪಾಲ್ಗೊಂಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ವಿಜಯಕುಮಾರ ಪತ್ತಾರ ಮಾತನಾಡಿದರು. ಸಿಂದಗಿ ನಗರದ ಗಣ್ಯವರ್ತಕ ರಾಜಶೇಖರ ಉಪ್ಪಿನ ದಂಪತಿಗಳು ಅನ್ನ ಪ್ರಸಾದ ವ್ಯವಸ್ಥೆ ಮಾಡಿ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾದರು. ಜಯಂತಿಯಲ್ಲಿ ಮೂರಜಾವದಮಠ ಶ್ರೀ ಈರಯ್ಯ ಸ್ವಾಮಿಗಳು, ಶ್ರೀಪಾದ ಮಲ್ಲೇದ, ಬಸವರಾಜ ಶಿವಶಿಂಪಗೇರ, ಈರಣ್ಣ ಬಡಿಗೇರ, ರಾಮನಗೌಡ ಬಿರಾದಾರ, ಚನ್ನಪ್ಪಗೌಡ ಬಿರಾದಾರ, ಗುರಪ್ಪ ಪತ್ತಾರ, ರುದ್ರಯ್ಯ ಹಿರೇಮಠ, ಸಂಗಮೇಶ ಕುಂಬಾರ, ಪ್ರಭುಲಿಂಗ ಕುಂಬಾರ, ಮತ್ತು ಎಪಿಎಮ್ಸಿ ಯೋಗಾ ಗ್ರೂಪಿನ ಎಲ್ಲಾ ಸದಸ್ಯರು ಸೇರಿದಂತೆ ಇತರರು ಭಾಗವಹಿಸಿದ್ದರು.


