ಬಳ್ಳಾರಿ,03 : ಬಡತನದಲ್ಲಿ ಇದ್ದ ಸಮುದಾಯದ ಹಣ ಕೊಳ್ಳೆ ಹೊಡೆಯುವಂತಹದ್ದು ಬಹಳ ನೋವಿನ ಸಂಗತಿ ಕರ್ನಾಟಕದ ಜನರು ನೋವಿನಿಂದ ಇದ್ದಾರೆ ಎಂದು ಶ್ರೀ ರಾಮುಲು ಆರೋಪಿಸಿದರು. ನಗರದ ಹವಂಬಾವಿಯ ತಮ್ಮ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಹಣ ದುರುಪಯೋಗ ಆಗಿದ್ದು ಇದು ಮೊದಲನೆಯ ಪ್ರಕರಣ ಎಂದು ತಿಳಿಸಿದರು.
ಎಸ್ಐಟಿ ತನಿಖೆ ಸರ್ಕಾರ ನೀಡಿದ್ದು, ರಾಜೀನಾಮೆ ಕೊಡಿಸಲು ಸಿಎಂ ಮತ್ತು ಡಿಸಿಎಂ ಕೊಡಿಸಿದರೆ ಮುಜುಗರಕ್ಕೆ ಹಿಡುಮಾಡುತ್ತದೆ ಆದರೆ ರಾಜೀನಾಮೆ ಪಡೆಯಲು ಸಿಎಂ ಗೆ ಒತ್ತಾಯ ಮಾಡುತ್ತೇನೆ ಎಂದರು.
ಬಹಳ ದೊಡ್ಡ ಮಟ್ಟದ ಹಣ ದುರುಪಯೋಗ ಆಗಿರುವುದರಿಂದ ಎಸ್ಐಟಿಗೆ ಇದು ಅನ್ವಯಿಸುವುದಿಲ್ಲ ಆಗಾಗಿ ಸಿಬಿಐಗೆ ಪ್ರಕರಣ ಕೊಡಬೇಕೆಂದು ಆಗ್ರಹಿಸಿದರು.
ಯೂನಿಯನ್ ಬ್ಯಾಂಕ್ ಈಗಾಗಲೇ ಸಿಬಿಐಗೆ ನೀಡಿದೆ,ಆದರೆ ಸರ್ಕಾರ ಸಿಬಿಐಗೆ ಕೊಡಬೇಕು ಎಂದು ಸ್ಪಷ್ಟಪಡಿಸಿದರು. ಒಬ್ಬ ಬ್ಯಾಂಕ್ ಅಧಿಕಾರಿ ಡೆತ್ ನೋಟಿನಲ್ಲಿ ಉಲ್ಲೇಖವಿದೆ ಸಚಿವ ಮೌಖಿಕ ಆದೇಶ ಇದ್ದರೂ ಕೂಡ ಸರ್ಕಾರ ರಾಜೀನಾಮೆ ಪಡೆಯಲು ಹಿಂದೇಟು ಹಾಕುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ಹೇಳಿದರು.
ನಿಗಮ ದಿಂದ ರಾಜ್ಯದ ವಾಲ್ಮೀಕಿ ಸಮುದಾಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಭೂ ಒಡೆತನ,ಗಂಗ ಕಲ್ಯಾಣ, ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಸ್ಕಾಲರ್ಶಿಪ್ ಇನ್ನಿತರ ಸೌಲಭ್ಯಗಳನ್ನು ನೀಡುವುದು ಬಿಟ್ಟು ಅಕ್ರಮವಾಗಿ ಹಣವನ್ನು ದುರುಪಯೋಗ ಮಾಡಿಕೊಂಡು ಪಡೆದಿದ್ದು, ಹಾಗೂ ಬಳಕೆ ಬೇಸರ ಸಂಗತಿ ಮತ್ತು ಸಮುದಾಯಕ್ಕೆ ಮಂತ್ರಿ ಮತ್ತು ಸಿಎಂ ಮಾಡಿದ ಮೋಸ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಎಂಎಲ್ಸಿ ವೈ.ಎಂ ಸತೀಶ್, ಜಿಲ್ಲಾ ಅದ್ಯಕ್ಷ ಅನಿಲ್ ನಾಯ್ಡು, ನಿಗಮದ ಮಾಜಿ ಅದ್ಯಕ್ಷ ಎಚ್.ಹನುಮಂತಪ್ಪ, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.