ಬಳ್ಳಾರಿ ಬ್ಯಾನರ್ ಗಲಾಟೆ ಪೈರಿಂಗ್ ಗಂಭೀರವಾಗಿ ಪರಿಗಣಿಸದ ಸರ್ಕಾರ: ಶ್ರೀರಾಮುಲು

Sandeep Malannavar
ಬಳ್ಳಾರಿ ಬ್ಯಾನರ್ ಗಲಾಟೆ ಪೈರಿಂಗ್ ಗಂಭೀರವಾಗಿ ಪರಿಗಣಿಸದ ಸರ್ಕಾರ: ಶ್ರೀರಾಮುಲು
WhatsApp Group Join Now
Telegram Group Join Now
ಬಳ್ಳಾರಿ, ಜ.21: ಬ್ಯಾನರ್ ವಿಷಯದಲ್ಲಿ ನಗರದಲ್ಲಿ ಜ.1 ರಂದು ನಡೆದ ಪೈರಿಂಗ್ ಗಲಾಟೆಯ ಬಗ್ಗೆ ಎಲ್ಲಾ ರೀತಿಯ ಸಾಕ್ಷಿಗಳನ್ನು ನಾನು ಪೊಲೀಸರಿಗೆ ನೀಡಿದೆ. ಆದರೂ ಈ ವಿಷಯದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರು ಇಂದು ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ. ಪ್ರಕರಣವನ್ನು ಸಿಐಡಿಗೆ ವಹಿಸಿದೆಂದು ಕೈ ಕಟ್ಟಿ ಕುಳಿತಿದೆ. ಈ ಘಟನೆಯಲ್ಲಿ ನಮಗೆ ನ್ಯಾಯ ದೊರಕುವವರೆಗೆ ನಮ್ಮ ಹೋರಾಟ ನಡೆಯಲಿದೆ. ಮತ್ತೊಮ್ಮೆ ಗೃಹ ಸಚಿವರನ್ನು ಭೇಟಿ ಮಾಡಿ ಈ ವಿಷಯ ಚರ್ಚಿಸಲಿದ್ದೆನೆಂದರು.
ನಗರದಲ್ಲಿ ಮಟ್ಕಾ, ಜೂಜಾಟ, ಡಗ್ಸ್ ಮಾಫಿಯಾ ಶಾಸಕರ ಬೆಂಬಲದಿಂದ ನಡೆಯುತ್ತದೆ ಎಂದು ಆರೋಪಿಸಿದ ಅವರು. ನಗರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆಂದರು.
ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆಯಿತು. ಈಗ ಪಂಚ ರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಪ್ರಕರಣ ನಡೆಯುತ್ತಿದೆ. ಇದರಲ್ಲಿ ನೇರವಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಪುತ್ರ ಭಾಗಿಯಾಗಿದ್ದಾರೆ. ಅದಕ್ಕಾಗಿ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸಿಎಂ ಸೀಟು ಗೊಂದಲ; ರಾಜ್ಯದಲ್ಲಿ ಇನ್ನೂ ಸಿಎಂ ಸೀಟಿನ ಗೊಂದಲ ಬಗೆಹರಿಯದ ಕಾರಣ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಇತರ ರಾಜ್ಯಗಳ ಚುನಾವಣಾ ವೆಚ್ಚಕ್ಕೆ ಕಾಂಗ್ರೆಸ್ ಗೆ ಎಟಿಎಂ ಆಗಿ ಕೆಲಸ ಮಾಡುತ್ತಿದೆಂದು ಆರೋಪಿಸಿದರು.
ಕ್ಷಮೆ ಯಾಚನೆ;ಗಾಂಜಾ, ಡ್ರಗ್ಸ್ ನಿಂದ ಓರ್ವ ಬಾಲಕಿ ನಗರದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಆ ಬಾಲಕಿಯ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುವೆ. ಇದನ್ನು ಪ್ರಸ್ತಾಪ ಮಾಡಬಾರದಿತ್ತು. ಬಾಯಿ ತಪ್ಪಿ ಮಾತಾಡಿದ್ದು. ಅದಕ್ಕಾಗಿ ಆ ಬಾಲಕಿಯ ಕುಟುಂಬದ ಜೊತೆ ಸದಾ ನಾನು ಇರುತ್ತೇನೆ.‌ ಈ ವಿಷಯದಲ್ಲಿ ಕಾನೂನನ್ನು ಎದಿರಿಸುವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಬುಡಾ ಮಾಜಿ ಅಧ್ಯಕ್ಷ ಪಿ.ಪಾಲಣ್ಣ, ಬಿಜೆಪಿ ಪಕ್ಷದ ಮುಖಂಡರಾದ ತಿಮ್ಮಪ್ಪ, ಓಬಳೇಶ್, ಹಲಕುಂದಿ ಮಲ್ಲಿಕಾರ್ಜುನಗೌಡ, ಕೆ.ಹನುಮಂತಪ್ಪ ಮೊದಲಾದವರು ಇದ್ದರು.
WhatsApp Group Join Now
Telegram Group Join Now
Share This Article