ಮುನವಳ್ಳಿ: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಶ್ರೀ ರಾಮನವಮಿ ಅಂಗವಾಗಿ ರವಿವಾರ ಸಂಜೆ ರುದ್ರಾಭಿಷೇಕ, ವಿಷೇಶ ಅಲಂಕಾರ ಪೂಜೆ, ಆರತಿ, ಪಲ್ಲಕ್ಕಿ ಉತ್ಸವ ಭಜನೆ ಹಾಗೂ ಶ್ರೀ ರಾಮನ ತೊಟ್ಟಿಲೋತ್ಸವ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಳವಾಯಿತು. ಸಾಯಿ ಸೇವಾ ಸಮಿತಿ ಹಾಗೂ ಸದ್ಬಕ್ತರು ಉಪಸ್ಥಿತರಿದ್ದರು.