ಉಗಾರ ಖುರ್ದ. 12. ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದಾಸ ಸಾಹಿತ್ಯ ಭಜನಾ ಮಂಡಳಿಗಳ ಸದಸ್ಯರಿಗಾಗಿ ಉಗಾರದ ಭಜನಾ ಮಂಡಳಿಯ ವತಿಯಿಂದ ಶ್ರೀನಿವಾಸ ಕಲ್ಯಾಣ ಭಕ್ತಿ ಮಯ ವಾತಾವರಣದಲ್ಲಿ ಸಂಭ್ರಮ ಸಡಗರಗಳಿಂದ ಜರುಗಿತು. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಸಂಚಾಲಕರಾದ ಡಾ. ಪಂಡಿತ್ ವಿಜಯೇಂದ್ರಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಸಹೋದರಿ ಶ್ರೀಮತಿ ಸಂಜೋತಾ ದೇಶಪಾಂಡೆ ಆವರ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಉಗಾರ ಇವರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಘಟಪ್ರಭಾದ ಶ್ರೀ ಸರಸ್ವತಿ ಭಜನಾ ಮಂಡಳಿಯ ಶ್ರೀಮತಿ ಶ್ರೀದೇವಿ ಕುಲಕರ್ಣಿ, ಸಂಧ್ಯಾ ಕುಲಕರ್ಣಿ, ಶಕುಂತಲಾ ಮಹಾಜನ, ರೋಹಿಣಿ ದೇಶಪಾಂಡೆ, ವಂದನಾ ದೇಶಪಾಂಡೆ, ಅಶ್ವಿನಿ ದೇಶಪಾಂಡೆ, ಶ್ರೀಮತಿ, ಉಗ್ರಾಣಿ, ರಘುವೀರ್ ಪಾಟೀಲ ಸೇರಿದಂತೆ ವಿವಿಧ ಭಾಗಗಳಿಂದ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು.