ಬಳ್ಳಾರಿ ಮೇ 17 : ಇತ್ತೀಚಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆ ಮತ್ತು ತಾಲೂಕಿನ ಕೃಷಿ ಜಮೀನುಗಳಲ್ಲಿ ಹಾಗೂ ನಗರದ ಹಲವಾರು ಲೇಔಟ್ಗಳಲ್ಲಿ ಮತ್ತು ಬಳ್ಳಾರಿ ನಗರದ ತಾಳೂರು ರಸ್ತೆ ಇತರ ಕಡೆಗಳಲ್ಲಿ
ಕೊನಾ ಕಾರ್ಪಸ್ ಗಿಡಗಳು ನೆಟ್ಟಿದ್ದು ಅವುಗಳಿಂದ ಮಾನವನ ಜೀವಕ್ಕೆ ಹಾನಿಯಾಗುತ್ತದೆ ಅಷ್ಟೇ ಅಲ್ಲದೆ ಜನರ ಉಸಿರಾಟದ ತೊಂದರೆ ಸೇರಿದಂತೆ ಇತರ ಗಂಭೀರ ಅರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಇತ್ತೀಚೆಗೆ ನಗರದ ಕೇಂದ್ರ ಗ್ರಂಥಾಲಯದಲ್ಲಿ ಬೆಳೆದಿದ್ದು ಈ ಗಿಡಗಳಿಂದ ಅಲ್ಲಿ ವಾಯು ವಿಹಾರಕ್ಕೆ ಬರುತ್ತಿದ್ದ ಅನೇಕ ಜನರಿಗೆ ಉಸಿರಾಟದ ತೊಂದರೆಯಾಗಿ ಅವುಗಳನ್ನು ಅಲ್ಲಿಯ ಸಾರ್ವಜನಿಕರೇ ಹಣ ಕೊಟ್ಟು ಕಿತ್ತಿ ಹಾಕಿಸಿದ್ದಾರೆ. ಅಲ್ಲದೆ ಬಳ್ಳಾರಿ ನಗರದ ಹಲವಾರು ಲೇಔಟ್ಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಇರುವ ಈ ಗಿಡಗಳನ್ನು ತಕ್ಷಣವೇ ತೆಗೆಸಿ ಹಾಕಿ ಈ ಗಿಡಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಗಂಭೀರವಾದ ಸಮಸ್ಯೆಗಳಿಂದ ದೂರ ಮಾಡಬೇಕೆಂದು
ಅವರು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಗಿಡಗಳಿಂದ ಮಾನವನಿಗೆ ಮತ್ತು ಪರಿಸರಕ್ಕೆ ಈ ರೀತಿಯಾಗಿ ಹಾನಿಯಾಗುತ್ತದೆ ಎಂದು ರೆಡ್ಡಿ ವಿವರಿಸಿದ್ದಾರೆ. ಕೊನಾಕಾರ್ಪಸ್ (Conocarpus erectus), ಸಾಮಾನ್ಯವಾಗಿ “ಬಟನ್‌ವುಡ್” ಅಥವಾ “ಡಮ್ಮಿ ಗಿಡ” ಎಂದು ಕರೆಯಲ್ಪಡುವ ಈ ಗಿಡವನ್ನು ಕೆಲವು ಪರಿಸರಗಳಲ್ಲಿ ನೆಡಬಾರದು ಎನ್ನುವುದಕ್ಕೆ ಮುಖ್ಯವಾದ ಕೆಲವು ಕಾರಣಗಳನ್ನು ರೆಡ್ಡಿ ಪತ್ರಿಕೆಯ ಮುಂದೆ ಇಟ್ಟಿದ್ದಾರೆ.
1. ಮೂಲಹಾನಿ (Root Damage):
ಈ ಗಿಡದ ಬೇರುಗಳು ಬಹಳ ಶಕ್ತಿಶಾಲಿಯಾಗಿದ್ದು, ಅವು ರಸ್ತೆಗಳು, ಕೊಠಡಿಗಳ ನೆಲಕಡಲೆಗಳು, ಕೊಳವೆ ನೀರು ವ್ಯವಸ್ಥೆಗಳಿಗೆ ಹಾನಿ ಮಾಡಬಹುದು.
2. ಪರಿಸರದ ಮೇಲೆ ಪ್ರಭಾವ:
ಈ ಗಿಡ ಸ್ಥಳೀಯ (native) ಅಲ್ಲದ ಪ್ರಭಾವ ಬೀರಬಲ್ಲದು. ಸ್ಥಳೀಯ ಇಕೋಸಿಸ್ಟಮ್‌ಗೆ ಹಾನಿ ಮಾಡುವ ಸಾಧ್ಯತೆ ಇದೆ, ಹಾಗಾಗಿ ಪ್ರಾಕೃತಿಕ ಸಜೀವ ಜೀವಿಗಳ ತೂಕಡಿಸುತ್ತೆ.
3. ಹೆಚ್ಚು ನೀರಿನ ಬೇಡಿಕೆ:
ಕೊನಾಕಾರ್ಪಸ್ ಹೆಚ್ಚು ನೀರನ್ನು ಸೆಳೆಯುವ ಗಿಡವಾಗಿದೆ. ಇದು ಬಾವಿಗಳು, ನದಿಗಳು ಮತ್ತು ಇತರ ನೀರಿನ ಮೂಲಗಳಿಗೆ ಒತ್ತಡ ಉಂಟುಮಾಡಬಹುದು.
4. ಅತಿ ವೇಗವಾಗಿ ಬೆಳೆಯುವಿಕೆ:
ಇದು ವೇಗವಾಗಿ ಬೆಳೆಯುತ್ತದಾದ್ದರಿಂದ ನಿಯಂತ್ರಣವಿಲ್ಲದಂತೆ ಹಬ್ಬಿ, ಇತರ ಗಿಡಗಳಿಗೆ ಬೆಳಕು ಮತ್ತು ಜಾಗ ಒದಗಿಸದಂತೆ ಮಾಡಬಹುದು.
5. ಅಲರ್ಜಿ ಮತ್ತು ಆರೋಗ್ಯ ಸಮಸ್ಯೆಗಳು:
ಇದರ ಎಲೆಗಳಿಂದ ಅಥವಾ ಪೊದೆಯ ಸುತ್ತಲಿನ ಭಾಗದಿಂದ ಕೆಲವೊಮ್ಮೆ ಅಲರ್ಜಿ ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು ಎಂಬ ನಂಬಿಕೆಗಳು ಹಲವೆಡೆ ಇರುವುದರಿಂದ ಕೆಲವರು ಇದನ್ನು ತಪ್ಪಿಸುವಂತೆ ಸೂಚಿಸುತ್ತಾರೆ.
ಈ ಎಲ್ಲಾ ಕಾರಣಗಳಿಂದ ತಾವುಗಳು ಈ ಗಿಡಗಳನ್ನು ತೆರವುಗಳಸಲು ಕ್ರಮ ಕೈಗೊಳ್ಳಬೇಕೆಂದು ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ ರೆಡ್ಡಿ ಜಿಲ್ಲಾ ಆರೋಗ್ಯ ಅಧಿಕಾರಿ ಮಹಾನಗರ ಪಾಲಿಕೆ ಅಧಿಕಾರಿ, ಬುಡ ಅಧಿಕಾರಿ ಮತ್ತು ಉದ್ಯಾನವನ ನಿರ್ವಹಣೆ ಮಾಡುವ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.