ಕೊಪ್ಪಳ, ಅ. 21: ಕೊಪ್ಪಳ ನಗರಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಗುಪ್ತಾ ನೇಮಕ ಆಗಿದ್ದಾರೆ. ಸೋಮವಾರ ಅಧ್ಯಕ್ಷರ ಹಾಗೂ ಸದಸ್ಯರ ಅಧಿಕಾರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಸ್ಥಳೀಯರ ಅನುಕೂಲತೆ ಅನುಗುಣವಾಗಿ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ನೂತನ ಅಧ್ಯಕ್ಷರು ಹೇಳಿದರು.
ಈ ವೇಳೆ ಮಾಜಿ ಶಾಸಕರಾದ ಕೆ. ಬಸವರಾಜ್ ಹಿಟ್ನಾಳ, ಮಾಜಿ ಜಿ ಪಂ ಅಧ್ಯಕ್ಷರಾದ ಎಸ್ ಬಿ ನಾಗರಳ್ಳಿ, ಮಾಜಿ ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜನಾರ್ಧನ್ ಹುಲಿಗಿ, ಕೃಷ್ಣ ಇಟ್ಟಂಗಿ, ಪ್ರಸನ್ನ ಗಡಾದ್, ಕೃಷ್ಣರೆಡ್ಡಿ ಗಲ್ಬಿ, ಗಾಳೆಪ್ಪ ಪೂಜಾರ್, ತುಕಾರಾಮಪ್ಪ ಗಡಾದ, ಹೊನ್ನೂರ್ ಸಾಬ್, ಚನ್ನಪ್ಪ ತಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.