ಬೆಳಗಾವಿ ಗ್ರಾಮದಲ್ಲಿ ಜ್ಞಾನ ಸಪ್ತಾಹ, ಹಾಗೂ ದೇವಿ ಪರಾಯಣ
ಹುಕ್ಕೇರಿ ; ತಾಲೂಕಿನ ಬೆಳವಿ, ಸಾರಾಪುರ, ಶಿರಹಟ್ಟಿ ಗ್ರಾಮಗಳ ಮಧ್ಯದಲ್ಲಿರುವ ಶ್ರೀ ಸದ್ಗುರು ಸಿದ್ಧಾರೂಢ ಮಠದಲ್ಲಿ ಮಕರ ಸಂಕ್ರಮಣದ ಹಾಗೂ ಕಲ್ಲೇಶ್ವರ ಸ್ವಾಮಿಗಳ ೧೮ನೇ ಪುಣ್ಯಾರಾಧನೆ ನಿಮಿತ್ಯ ಪರಮಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ಸಂಕಲ್ಪದಂತೆ ೩೭ ನೆ ಶಿವನಾಮ ಸಪ್ತಾಹ ಹಾಗೂ ಶ್ರೀ ದೇವಿ ಪಾರಾಯಣ ಮತ್ತು ಶ್ರೀಮದ್ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ಜನೇವರಿ ೧೨ ರಿಂದ ೧೪ ರವರೆಗೆ ನಡೆಯಲಿದೆ.
ಶೇಂದ್ರಿಯ ಸಿದ್ದಾರೂಡ ಮಠದ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ದಿನನಿತ್ಯ ಹನಿಮನಾಳದ ಬಾಳ ಕೃ? ಪರೀಟ ಗುರೂಜಿ ಅವರಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ ಅವರಿಂದ ದೇವಿ ಪರಾಯಣ ನಡೆಯಲಿದೆ.
ಸೋಮವಾರ ದಿ. ೧೨ ರಂದು ಕ್ಯಾರಗುಡ್ಡ ಅವೂಜಿಕರ ಆಶ್ರಮದ ಮಲ್ಲೇಶ್ವರ ಮಹಾರಾಜರು, ಓಂಕಾರ ಧ್ವಜಾರೋಹಣ ನಡೆಯಲಿದೆ.

ಸಂಜೆ ಮಹಾತ್ಮರ ಪ್ರವಚನದಲ್ಲಿ ಕಕ್ಕೇರಿಯ ರಾಮಾನಂದ ಭಾರತಿ ಸ್ವಾಮಿಗಳು, ಘೋಡಗೇರಿಯ ಶಿವಾನಂದ ಮಹಾಸ್ವಾಮಿಗಳು, ಶರಣರಾದ ಕೆಂಪಣ್ಣಾ ಬಂಗಾರಿ, ಬಸವಪ್ರಭುಮಹಾರಾಜರು, ಗಿರಿಗಾಔಮದ ನರಸಿಂಗೇಶ್ವರ ಮಹಾರಾಜರು, ಭಾಗವಹಿಸುವರು,
ಮಂಗಳವಾರ ದಿ ,೧೩ ರಂದು ರಾಜರಾಜೇಶ್ವರಿ ಆಶ್ರಮ ಯರಗಟ್ಟಿಯ ಗಣಪತಿ ಮಹಾರಾಜರು ಆಶೀರ್ವಚನ,
ಬುಧವಾರ ೧೫ ರಂದು ಯರನಾಳದ ಬ್ರಹ್ಮಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ. .ಪರಮಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ಬಾಬು ನಾಯಿಕ, ಈಶ್ವ ರ ಚೌಗಲಾ, ರಾಮಣ್ನ ಬಂದಾಯಿ, ಮಾರುತಿ ಪಾಂಡ್ರೆ, ಆಗಮಿಸಲಿದ್ದಾರೆ.ಬೆಳವಿ,ಶೇಲಾಪುರ,ಶಿರಹಟ್ಟಿ,ಮುಗಳಿ,ಮದಿಹಳಿ.ಬೆಣ್ಣಿವಾಡ ಗ್ರಾಮದ ಭಜನಾ ಕಾರ್ಯಕ್ರಮ ನಡೆಯಲಿದೆ.
ಪೋಟೋ ಶೀರ್ಷಿಕೆ ೧೦-ಹುಕ್ಕೇರಿ-೦೨
ಬೆಳವಿ ಮೃತ್ಯುಂಜಯ ಶ್ರೀಗಳು.


