ಘಟಪ್ರಭಾ. 02. 2001ನೇ ಇಸ್ವಿಯಲ್ಲಿ ಜಾರಿಗೆ ಬಂದಿರುವ ಸೌಹಾರ್ದ ಸಹಕಾರಿ ಕಾಯ್ದೆ ಯ ಅನುಷ್ಠಾನ ದಿಂದ ಸಹಕಾರಿ ರಂಗದಲ್ಲಿ ಸಾಮಾನ್ಯ ನಾಗರಿಕರಿಗೆ ಮತ್ತು ಸಣ್ಣ ಪ್ರಮಾಣದ ವ್ಯವಹಾರ ಮಾಡುವವರಿಗೆ ವಿಶೇಷ ಅನುಕೂಲ ಆಗುತ್ತಿದೆ ಎಂದು ಘಟಪ್ರಭಾದ ಸಾಮಾಜಿಕ ಕಾರ್ಯಕರ್ತ ಹಾಗೂ ಶ್ರೀ ಶಿವಚಿದಂಬರೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ ಮಲ್ಲಾಪುರ ಪಿ ಜಿ ಅಧ್ಯಕ್ಷರಾದ ಶ್ರೀಕಾಂತ ವಿ ಮಹಾಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಸೌಹಾರ್ದ ಸಹಕಾರಿ ಕಾಯ್ದೆ ಅನುಷ್ಠಾನದ ಬೆಳ್ಳಿ ಹಬ್ಬದ (25 ನೇಯ) ವರ್ಷದ ಆಚರಣೆ ಯ ನಿಮಿತ್ತವಾಗಿ ಸೌಹಾರ್ದ ಸಹಕಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುರೇಶ್ ಪುರೋಹಿತ, ನಿರ್ದೇಶಕರಾದ ರಾಮಚಂದ್ರ ( ಅರುಣ) ದೇಶಪಾಂಡೆ, ಆನಂದ ದೇಶಪಾಂಡೆ, ಶ್ರೀನಿವಾಸ ಕುಲಕರ್ಣಿ,ಶ್ರೀಮತಿ ಹೇಮಾ ಕುಲಕರ್ಣಿ, ಕಾರ್ಯದರ್ಶಿ ಪ್ರಿಯಾ ಡುಮ್ಮನವರ, ಅಮಿತ್ ತಳವಾರ, ಪ್ರಲ್ಹಾದ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.