ಬೆಳಗಾವಿ,ಏ.24: ಪ್ರತಿವರ್ಷದಂತೆ ಈ ವರ್ಷವೂ ಮೂಡಲಗಿ ತಾಲೂಕಿ ಯಾದವಾಡ ಘಟ್ಟಗಿ ಬಸವೇಶ್ವರ ಜಾತ್ರೆಯು ನಡೆಯಲಿದೆ. ಶ್ರೀ. ಲಿಂಗೈಕ್ಯ ಚೌಕೇಶ್ವರ ಮಹಾಶಿವಯೋಗಿಗಳು ಚೌಕಿಮಠ ಇವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಶ್ರೀ ಈಶ್ವರ ದೇವರು ಹಾಗೂ ಶ್ರೀಘಟ್ಟಗಿ ಬಸವೇಶ್ವರ ಮಹಾ ಮಸ್ತಾಭಿಷೇಕ ರಥದ ಕಳಸಾರೋಹಣ ಹಾಗೂ ಮಹಾರಥೋತ್ಸವ ಏಪ್ರಿಲ್ ೧೯ರಿಂದ ೨೯ರವರೆಗೆ ನಡೆಯಲಿದೆ.
ಬಂಡಿ ಸ್ಪರ್ಧೆ, ತೇರಬಂಡಿ ಸ್ಪರ್ಧೆ, ಒಂದೇ ಎತ್ತಿನ ಕಲ್ಲು ಜಗ್ಗುವ ಸ್ಪರ್ಧೆ, ಕೂಡುಗಾಡಿ ಬಂಡಿ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಲು ನಡೆಯಲಿವೆ. ಚೌಕಿಮಠ ಶ್ರೀಗಳಿಂದ ಬಹುಮಾನ ವಿತರಣೆ ಹಾಗೂ ಸನ್ಮಾನ. ಪ್ರತಿನಿತ್ಯ ಭಕ್ತರಿಂದ ಅನ್ನದಾಸೋಹ ನಡೆಯಲಿದೆ.
ಮೊದಲನೇ ದಿನ ನ್ಯಾಮಗೌಡರ ಬಳಗ, ಎರಡನೇದಿನ ಕೇರಿ ಬಳಗ, ಗಡೇಕರ ಹಾಗೂ ಯರಗುದ್ರಿ ಬಳಗ, ಪಾಟೀಲ ಬಂಧುಗಳು, ಹಾಗೂ ಜಾತ್ರೆ ಕಮೀಟಿ ಯಾದವಾಡ ಮತ್ತು ಸುತ್ತಮುತ್ತಲಿನ ಸದ್ಭಕ್ತರು ಭಾಗಿಯಾಗಲಿದ್ದಾರೆ.
ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಹಾಗೂ ಎಲ್ಲ ಸಿಬ್ಬಂದಿ ವರ್ಗ ಗ್ರಾಮದ ಹಿರಿಯರು, ಜಾತ್ರೆ ಮುಖಂಡರು, ಎಲ್ಲರೂ ಭಾಗಿಯಾಗಿ ಜಾತ್ರೆಯನ್ನು ಯಶಸ್ವಗೊಳಿಸಬೇಕು ಎಂದು ಜಾತ್ರೆ ಕಮೀಟಿ ಅಧ್ಯಕ್ಷರಾದ ಶಿವಪ್ಪಗೌಡ ಬ ನ್ಯಾಮಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.