ಶ್ರೀ ಸಿದ್ರಾಮೇಶ್ವರ ಜೀವನ ಚರಿತೆ ಪುರಾಣ ಮಂಗಳ

Ravi Talawar
ಶ್ರೀ ಸಿದ್ರಾಮೇಶ್ವರ ಜೀವನ ಚರಿತೆ ಪುರಾಣ ಮಂಗಳ
WhatsApp Group Join Now
Telegram Group Join Now
ನೇಸರಗಿ. ಇಲ್ಲಿನ ಪ್ರತಿಷ್ಠಿತ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾಮಠದಲ್ಲಿ ಶ್ರಾವಣ ಮಾಸದಲ್ಲಿ  ಅರಣ್ಯ ಇಲಾಖೆಯ ಅಶೋಕ ಬೀಜಗತ್ತಿ ಅವರು   ಒಂದು ತಿಂಗಳ ಕಾಲ ಪುರಾಣ ಪಠಣ ಮುಕ್ತಾಯವಾದ  ಪ್ರಯುಕ್ತ ಪವಾಡ ಪುರುಷ ಶ್ರೀ ಸಿದ್ರಾಮೇಶ್ವರ ಜೀವನ ಚರಿತ್ರೆ ಪುರಾಣ ಪಠಣಕ್ಕೆ ಅಮಾವಾಸ್ಯಯ ದಿನ ಮಂಗಳ (ಮುಕ್ತಾಯ ) ಕಾರ್ಯಕ್ರಮ ನೆರವೇರಿತು.
   ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನೇಸರಗಿ – ಮಲ್ಲಾಪೂರ ಮಠದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಆದರ್ಶ ಮಹಾನ್ ಪವಾಡ ಪುರುಷ ಶ್ರೀ ಸಿದ್ರಾಮೇಶ್ವರ ಮಹಾಸ್ವಾಮಿಗಳು ನಡೆದು ಬಂದ ಹಾದಿ, ಜೀವನ ಚರಿತ್ರೆ  ಪವಿತ್ರ ಶ್ರಾವಣ ತಿಂಗಳಲ್ಲಿ ಪಠಣ ಮಾಡಿದ್ದು ಉತ್ತಮ ಕಾರ್ಯ. ಇಂತಹ ಮಹಾನ್ ಪುರುಷರ ಚರಿತ್ರೆ ಕೇಳಿ ನಾವು  ಜೀವನದಲ್ಲಿ ಶರಣ ಸಂಪ್ರದಾಯ ಬೆಳೆಸಿಕೊಳ್ಳುವದು ಅವಶ್ಯಕತೆ ಇದೆ ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ಸಿದ್ದಯ್ಯ ಚರಂತಿಮಠ, ಯಲ್ಲಪ್ಪ ರೊಟ್ಟಿ, ಮಲ್ಲೇಶ ಯತ್ತಿನಮನಿ, ಅಶೋಕ ಅಗಸಿಮನಿ, ಮಹಾದೇವ ಮೇನಶಿನಕಾಯಿ, ಅಣ್ಣಪ್ಪ ಮಾಳಣ್ಣವರ,ಸಿದ್ದಪ್ಪ ಮದನಬಾವಿ, ಸಿದ್ದಪ್ಪ ಮದನಬಾವಿ, ಶಿವಾನಂದ ಮಾರಿಹಾಳ, ರುದ್ರಪ್ಪ ಹೊಂಡಪ್ಪನವರ, ಈರಪ್ಪ ಕುಂಟಗಿ, ಸುರೇಶ ಮದನಬಾವಿ,ರುದ್ರಪ್ಪ ಮಾಳಣ್ಣವರ, ರಮೇಶ ಮುನವಳ್ಳಿ, ಮಹಾಂತೇಶ್ ತರಗಾರ, ಬಸವಣ್ಣೆಪ್ಪ ಬಡಿಗೇರ, ಚಂದ್ರು ಮಾಳಣ್ಣವರ, ಬಸವರಾಜ ಸಾಲಿಮಠ,ಗಂಗಪ್ಪ ಗಲಬಿ, ನಿಂಗಪ್ಪ ಗಲಬಿ,ರತ್ನವ್ವ ಮದನಬಾವಿ, ಶೋಭಾ ತುಬಾಕಿ,ಮಂಜುಳಾ ಮುನವಳ್ಳಿ ಸೇರಿದಂತೆ ನೇಸರಗಿ ಗ್ರಾಮದ ಸದ್ಭಕ್ತರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article