ಇಂಡಿ: ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶತಮಾನ ಕಂಡ ಶ್ರೇಷ್ಟ ಸಂತ ಪರಮ ಪೂಜ್ಯ ಸಿದ್ದೇಶ್ವರಸ್ವಾಮಿಜಿಯವರ ಪ್ರೇರಣೆ ಅವರ ಅಭಿಮಾನ ಭಕ್ತಿ ಭಾವದಿಂದ ಶ್ರೀ ಅಮೃತಾನಂದ ಶ್ರೀಗಳ ಅಮೃತವಾಣಿಯನ್ನು ಆಲಿಸಲು ಆಗಮಿಸಿ ಪ್ರೋತ್ಸಾಹ ನೀಡಿದ ನಗರದ ಸರ್ವರಿಗೂ ಅಭಿನಂದಿಸವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ನಗರದ ಜಿ.ಆರ್.ಜಿ ಗಾಂಧಿ ಕಲಾ.ವೈ.ಎ.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಗುರು ನಮನ ಕಾರ್ಯಕ್ರಮದ ಪ್ರಯುಕ್ತ ನಡೆದ ಅಮೃತಾನಂದ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪೂಜ್ಯ ಶ್ರೀಗಳು ನಮ್ಮಿಂದ ಅಗಲಿದ್ದರು ಅವರು ಹಾಕಿಕೊಟ್ಟ ಸನ್ಮಾರ್ಗ ಇಂದಿಗೂ ನಮಗೆ ಪ್ರೇರಣಾ ಶಕ್ತಿಯಾಗಿ ಅಜರಾಮರವಾಗಿದ್ದಾರೆ. ಅಧ್ಯಾತ್ಮಿಕತೆಗೆ ಶ್ರೀಗಳು ಸ್ಪೂರ್ತಿಯಾಗಿದ್ದು ಅವರಿಂದಾಗಿ ಈ ಭಾಗದಲ್ಲಿ ಅಧ್ಯಾತ್ಮಿಕತೆ ಶಕ್ತಿ ವೃದ್ದಿಸಿದೆ. ಅವರ ದಾರಿಯಲ್ಲಿ ಸಾಗುತ್ತಿರುವ ಶ್ರೀ ಅಮೃತಾನಂದಸ್ವಾಮಿಜಿಗಳು ಕೂಡಾ ಯುವ ಜನಾಂಗಕ್ಕೆ ದಾರಿ ದೀಪವಾಗಿದ್ದು ವ್ಯಸನ ಮುಕ್ತ ಕಡೆ ಕೊಂಡ್ಯೊಯುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಚಿಂತನೆ ಹೊಂದಿದ್ದಾರೆ. ಕಳೇದ ಹಲವು ದಿನಗಳಿಂದ ಜರುಗಿದ ಶ್ರೀ ಅಮೃತಾನಂದ ಶ್ರೀಗಳ ಅಧ್ಯಾತ್ಮಿಕ ಪ್ರವಚನಕ್ಕೆ ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಿದ ನಗರದ ಯುವ ಸಮುಹಕ್ಕೆ ಕೃತಜ್ಞೆತೆ ಸಲ್ಲಿವುದಾಗಿ ಶಾಸಕರು ಹೇಳಿದರು.
ಶಿರಶ್ಯಾಡ ಹಿರೇಮಠದ ಪೂಜ್ಯ ಅಭಿನವ ಮುರುಗೇಂದ್ರ ಶಿವಾಚಾರ್ಯರರು, ಅಮಲಝರಿಯ ಶ್ರೀ ಜ್ಞಾನ ಮಾಯಾನಂದಸ್ವಾಮಿಜಿಗಳು, ಶ್ರೀಗಳು, ಶ್ರೀ ಬಸವಾನಂದಸ್ವಾಮಿಜಿಗಳು, ಶ್ರೀ ಮಹೇಶಾನಂದಸ್ವಾಮಿಜಿಗಳು, ಪೂಜ್ಯ ಅಮೃತಾನಂದಸ್ವಾಮಿಜಿಗಳು ಆಶಿರ್ವಚನ ನೀಡಿದರು,
ವೇದಿಕೆ ಮೇಲೆ ಚಿಕ್ಕಲಗಿಯ ಶ್ರೀ ಶರಣಾನಂದಸ್ವಾಮಿಜಿಗಳು, ಮುಳಸಆವಳಗಿಯ ಶ್ರೀ ಲಿಂಗರಾಜಸ್ವಾಮಿಜಿಗಳು, ಹತ್ತಳಿಯ ಪೂಜ್ಯರು, ಗಣೇಶಾನಂದಸ್ವಾಮಿಜಿಗಳು, ಶ್ರೀ ಸದಾಶಿವಸ್ವಾಮಿಜಿಗಳು, ಕರ್ಜಗಿಯ ಶ್ರೀ ಶಿವಾನಂದ ಶರಣರು, ಶಿರಗುಪ್ಪಿಯ ಭೈರವನಾಥ ಶ್ರೀಗಳು ಇದ್ದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಶ್ರೀಮಂತ ಇಂಡಿ, ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ.ಪಾಟೀಲ, ಶಾಂತೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಡಿ.ಎ.ಮುಜಗೊಂಡ, ಅನೀಲಗೌಡ ಬಿರಾದಾರ, ಅವಿನಾಶ ಬಗಲಿ, ಮಹೇಶ ಹನ್ನಬಿಂದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಿ.ಎ.ಮುಜಗೊಂಡ ಸ್ವಾಗತಿಸಿ ನೀರೂಪಿಸಿದರು.
ಪೋಟೊ ಕ್ಯಾಪ್ಸನ್ ೦೧ ಇಂಡಿ ೦೧: ನಗರದ ಜಿ.ಆರ್.ಜಿ ಗಾಂಧಿ ಕಲಾ.ವೈ.ಎ.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಗುರು ನಮನ ಕಾರ್ಯಕ್ರಮದ ಪ್ರಯುಕ್ತ ನಡೆದ ಅಮೃತಾನಂದ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.


