ಹುಬ್ಬಳ್ಳಿ:(ಡ..13), ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶ್ರೀಮಾತೆ ಶಾರದಾದೇವಿಯವರ ಜಯಂತ್ಯುತ್ಸವ ನಿಮಿತ್ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ ಮಹಾನ್ ಶಕ್ತಿ ಶ್ರೀಮಾತೆ ಶಾರದಾದೇವಿಯವರ ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಶ್ರದ್ಧಾ, ಭಕ್ತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಸ್ವಾಮಿ ತೇಜಸಾನಂದಜೀ ಮಹಾರಾಜ್ ಅವರಿಗೆ ಮಾಲಾರ್ಪಣೆ ಮಾಡಿ ಶ್ರದ್ಧಾ, ಭಕ್ತಿಯಿಂದ ಗೌರವಾರ್ಪಣೆ ಸಲ್ಲಿಸಿ, ದರ್ಶನ್ ಆಶೀರ್ವಾದ ಪಡೆದರು. ಸುಜಯ್ ಸುರೇಶ್ ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಡಾ. ವಿನಾಯಕ ಕುಲಕರ್ಣಿ, ಮಲ್ಲಿಕಾರ್ಜುನ, ಭಕ್ತರು ಸಂತಸ, ಸಂಭ್ರಮದಿಂದ ಭಾಗವಹಿಸಿದ್ದರು.


