ಇಂಡಿ: ೨೦೨೩-೨೪ ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶ್ರೀ ಸಾಯಿ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಕಳೆದ ಐದು ವರ್ಷಗಳಂತೆ ಈ ವರ್ಷವೂ ಶೇ ೧೦೦ ರಷ್ಟು ಫಲಿತಾಂಶವನ್ನು ಪಡೆದಿದೆ.
ಕುಮಾರಿ ಕೃಪಾ. ಆರ್. ಹ್ಯಾಳದ ಇವಳು ೬೧೫ ಅಂಕ ಪಡೆದು ಇಂಡಿ ತಾಲೂಕಿಗೆ ಪ್ರಥಮ ರ್ಯಾಂಕ್ ಹಾಗೂ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಮತ್ತು ಕುಮಾರಿ ಉಜ್ಮಾ. ಯು. ನಾಟೀಕಾರ ಇವಳು ೬೧೨ ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಅಮಿತ್.ಬಿ.ಯಲ್ಲಡಗಿ ಈತನು ೬೦೫ ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾನೆೆ.
ಒಟ್ಟು ೭೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ೫ ವಿದ್ಯಾಥಿಗಳು ಶೇ ೯೫ ಕ್ಕಿಂತ ಹೆಚ್ಚು, ೧೭ ವಿದ್ಯಾರ್ಥಿಗಳು ಶೇಕಡಾ ೯೦ ಕ್ಕಿಂತ ಹೆಚ್ಚು ಮತ್ತು ಇನ್ನುಳಿದ ಎಲ್ಲಾ ೪೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ೧೫ ವಿದ್ಯಾರ್ಥಿಗಳು ಶೇಕಡಾ ೬೦ ಕ್ಕಿಂತ ಹೆಚ್ಚು ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸಂಜೀವ. ಎಸ್. ಧನಪಾಲ, ಕಾರ್ಯದರ್ಶಿ ಶಿವಾನಂದ ಕೊಪ್ಪದ, ಹಾಗೂ ಎಲ್ಲ ನಿರ್ದೇಶಕರುಗಳು ಮತ್ತು ಶಾಲೆಯ ಆಡಳಿತಾಧಿಕಾರಿ ಡಾ|| ಎಸ್. ಎಸ್. ಕಲಘಟಗಿ, ಪ್ರಾಚಾರ್ಯರಾದ ಶ್ರೀ ವಿವೇಕಾನಂದ. ಬಿ. ಎಚ್. ಹಾಗೂ ಎಲ್ಲ ಶಿಕ್ಷಕ ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.