ಬೆಟಗೇರಿ 2: ಫೆ. 7ರಂದು ನಡೆಯಲಿರುವ ಪೂಜ್ಯ ವೀರಪ್ಪಜ್ಜ ಹಾಗೂ ಪೂಜ್ಯ ರಂಗಪ್ಪಜ್ಜನವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆಮಂತ್ರಣ ಸೇರಿದಂತೆ 2025 ನೇ ಸಾಲಿನ ದಿನದರ್ಶಿಕೆ (ಕ್ಯಾಲೆಂಡರ) ಇಂದು ಮುಂಜಾನೆ ಶ್ರೀ ರಂಗಾವಧೂತರ ಜೀರ್ಣೋದ್ದಾರ ಸೇವಾ ಸಮಿತಿಯಿಂದ ಬಿಡುಗಡೆ ಮಾಡಲಾಯಿತು.
ಈ ಸಂರ್ಭದಲ್ಲಿ ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರೆಪ್ಪ ಅರಣಿ, ಭೋಜಪ್ಪ ಹೆಗ್ಗಡಿ, ವಿಜಯ ಕಬಾಡಿ, ದುರ್ಗಾಸಿಂಗ್ ಕಾಟೇವಾಲ, ರಾಜು ಕಟಗಿ, ಅಶೋಕ ಮುಳಗುಂದ, ರಂಗಪ್ಪ ದ್ಯಾವಣಸಿ, ಎಂ. ಎನ್. ಐಲಿ, ರುದ್ರಪ್ಪ ಬಾದರದಿನ್ನಿ, ಮಹಾದೇವಸಾ ಮೇರವಾಡೆ, ಗುರನಗೌಡ ಗೌಡ್ರ, ನಾರಾಯಣ ಜುಟ್ಲಾ, ಸುನೀಲ ನಂದರಗಿ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.