ಸೂರ್ಯಾ  ಎಲಿಗೆನ್ಸ್ ಅಪಾರ್ಟಮೆಂಟ್‌ನ ಕನ್ನಡ ಭುವನೇಶ್ವರಿ ಸಂಘದಿಂದ ಶ್ರೀರಾಮ ನವಮಿ ಸಂಭ್ರಮ.

MK HasiruKranti
ಸೂರ್ಯಾ  ಎಲಿಗೆನ್ಸ್ ಅಪಾರ್ಟಮೆಂಟ್‌ನ ಕನ್ನಡ ಭುವನೇಶ್ವರಿ ಸಂಘದಿಂದ ಶ್ರೀರಾಮ ನವಮಿ ಸಂಭ್ರಮ.
WhatsApp Group Join Now
Telegram Group Join Now
ಬೆಂಗಳೂರು : 28 ಮಾರ್ಚ್ : ವಿಜೃಂಭಣೆಯಿಂದ ಶ್ರೀರಾಮ ನವಮಿ ಹಬ್ಬವನ್ನ ಆಚರಿಸಿದ ಅನೇಕಲ್ ತಾಲೂಕಿನ ಚಂದಾಪುರ ಸೂರ್ಯ ಎಲಿಗನ್ಸ್ ಅಪಾರ್ಟಮೆಂಟ್ನ ಶ್ರೀ ಕನ್ನಡ ಭುವನೇಶ್ವರಿ ಸಂಘದ ಸದಸ್ಯರು.
ಸಂಘದ ಅದ್ಯಕ್ಷರಾದ ಪಿ.ರಘುರಾಂ ನೇತೃತ್ವದಲ್ಲಿ ಕಾರ್ಯಾದ್ಯಕ್ಷ, ಬಾಬುರಾವ್ ಮತ್ತು ಇನ್ನಿತರ ಸದಸ್ಯರು ಮರ್ಯಾದೇ ಪುರುಷೋತ್ತಮನೆಂದೆ ಖ್ಯಾತಿ ಪಡೆದ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜಾ ಅವನಗಳನ್ನ ನೆರವೇರಿಸುವ ಮೂಲಕ ಸೂರ್ಯಾ ಎಲಿಗನ್ಸ್ ಅಪಾರ್ಟ್ ಮೆಂಟನ ಶ್ರೀ ಕನ್ನಡ ಭುವನೇಶ್ವರಿ ಸಂಘದ ಕಾರ್ಯ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.
ಇನ್ನು, ರಾಮನವಮಿ ಹಿನ್ನೆಯಲ್ಲಿ, ಅಪಾರ್ಟ್ ಮೆಂಟನ, ಉಪಾದ್ಯಕ್ಷ್ಯರಾದ ಬಿ ಎಂ. ರವಿ ಅವರ ನೇತೃತ್ವದಲ್ಲಿ ಶ್ರೀರಾಮನ ಭಕ್ತಿ ಗೀತಿಗಳನ್ನ, ನೆರೆದಿದ್ದ ನೂರಾರು ನಿವಾಸಿಗಳಿಗೆ ಪ್ರಸ್ತುತ ಪಡಿಸಿದರು.
ಇದೇ ಸಂದರ್ಭದಲ್ಲಿ, ಕಾರ್ಯದರ್ಶಿ ನರಸಿಂಹಮೂರ್ತಿಯವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಸ್ವಾಗತಿಸಿದರು.
ನಂತರ ಮಾತನಾಡಿದ ಅಧ್ಯಕ್ಷ್ಯರಾದ ರಘುರಾಮ್ ಸಂಘದ ಉದ್ದೇಶ ಮತ್ತು ಗುರಿಗಳ ಬಗ್ಗೆ ವಿವರಿಸಿದರೆ, ಸದಸ್ಯರಾದ ಶ್ರೀಮತಿ ರೂಪಾ ಅವರು ಸಂಘದ ಚಟುವಟಿಕೆಗಳು ಹಾಗು ಉದ್ದೇಶಗಳ ಬಗ್ಗೆ ಮೆಚ್ಚುಗೆ ವ್ಯೆಕ್ತ ಪಡಿಸಿ ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀರಾಮ ನವಮಿಯ ವಿಶೇಷ ಪೂಜೆಯ ನಂತರ ಸಾಕ್ಷಿಯಾದ ನೂರಾರು ನಿವಾಸಿಗಳಿಗೆ ಮತ್ತು ಸರ್ವಸದಸ್ಯರಿಗೆ, ಪಾನಕ,ಮಜ್ಜೆಗೆ, ಕೋಸಂಬರಿ ನೀಡಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ, ಖಜಾಂಚಿ,ಜಿ.ಎಸ್. ನಿಂಬಾಳ, ಜಂಟಿ ಕಾರ್ಯದರ್ಶಿಗಳಾದ, ವೆಂಕಟೇಶ,.ಗಾದ ನಾಗೇಂದ್ರ. ನಿರ್ದೇಶಕರಾದ, ಶ್ರೀನಿವಾಸ ಕುಲಕರ್ಣಿ, ಸಮೀರ್ ಕುಲರ್ಣಿ, ನಾಗಭೂಷಣ್, ದಿಲ್ ಶಾದ್ ಬೇಗಮ್ ಸೇರಿದಂತೆ ಅಪಾರ್ಟ ಮೆಂಟ ನಿವಾಸಿಗಳು ಸರ್ವಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article