ಗದಗ- ನಗರದ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಗದಗ ಜಿಲ್ಲಾ ವತಿಯಿಂದ ಶ್ರೀ ಮಹರ್ಷಿವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯಅತಿಥಿಗಳಾಗಿ ಆಗಮಿಸಿದ ನಿಗಮ ಮಂಡಳಿ ಮಾಜಿಅಧ್ಯಕ್ಷರಾದ ಎಂ.ಎಸ್.ಕರೀಗೌಡ್ರ ಮಾತನಾಡಿ ಶ್ರೀ ಮಹರ್ಷಿವಾಲ್ಮೀಕಿಯ ಚರಿತ್ರೆಯ ಕುರಿತು ಈ ಮಹಾನ್ ವ್ಯಕ್ತಿ
ರಾಮಾಯಣವನ್ನು ಬರೆದು ಜಗತ್ತಿಗೆ ಮಾದರಿಯಾದರು ಇಂತಹ ಮಹಾನ್ ವ್ಯಕ್ತಿಯ ಜಯಂತೋತ್ಸವವನ್ನು ಸರ್ವರೂ ಅತ್ಯಂತ ಹೆಮ್ಮೆಯಿಂದ ಆಚರಿಸುವಂತಾಗಲಿ ಎಂದು
ಮಾತನಾಡಿದರು.
ಬಿಜೆಪಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ ಮಹರ್ಷಿಗಳ ಜಯಂತಿಯನ್ನು ಜ್ಯಾತ್ಯಾತಿವಾಗಿ ನೆರವೇರಿಸಬೇಕು ಎಂದರು.ಪ್ರಮುಖರಾದ ರವಿ ದಂಡಿನ, ಈಶಪ್ಪ ನಾಯ್ಕರ,ಎಂ.ಎಂ.ಹಿರೇಮಠ ರವರು ಸಂದರ್ಭೊಚಿತವಾಗಿ ಶ್ರೀ ಮಹರ್ಷಿವಾಲ್ಮೀಕಿಯವರ ಕುರಿತು ವಿವರವಾಗಿ ಮಾತನಾಡಿದರು.
ಸಭೆಯಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷರಾದಈಶ್ವರಪ್ಪ ರಂಗಪ್ಪನವರ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿರವರ ತತ್ವ ಆದರ್ಶಗಳನ್ನು ಸಮಾಜಕ್ಕೆಕೊಡುಗೆಯನ್ನು ನೀಡಿದ ಮಹಾನ್ ವ್ಯಕ್ತಿಯದಿನಾಚಾರಣೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಜನಪ್ರೀಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀಬಿ.ಎಸ್.ಯಡಿಯೂರಪ್ಪನವರಿಗೆ ಹಾಗೂ ಮಾಜಿ ಸಚಿವರಾದ ಶ್ರೀ
ಬಿ.ಶ್ರೀರಾಮುಲುರವರಿಗೆ ಸರ್ಕಾರದ ಜಯಂತಿ ಎಂದುಘೋಷಿಸಿದ ಅವರಿಗೆ ತುಂಬು ಹೃದಯ ಧನ್ಯವಾದಗಳುಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಡರಾದ ಪ್ರಶಾಂತ ನಾಯ್ಕರ,ಗ್ರಾಮೀಣ ಮಂಡಲ ಅಧ್ಯಕ್ಷರಾದ ಬೂದಪ್ಪ ಹಳ್ಳಿ,ಅಶೋಕ ಕರೂರ, ರಾಘವೇಂದ್ರ ಯಳವತ್ತಿ,ಶಶಿಧರ ದಿಂಡೂರ, ಅನೀಲ ಅಬ್ಬಿಗೇರಿ, ರಮೇಶ ಸಜ್ಜಗಾರ,ನಾಗರಾಜ ತಳವಾರ, ಶಂಕರ ಕಾಕಿ, ಅಶೋಕ ಕುಡತಿನಿ,ವಿಜಯಲಕ್ಷ್ಮೀ ಮಾನ್ವಿ, ಪದ್ಮೀನಿ ಮುತ್ತಲದಿನ್ನಿ,ಡಿ.ಬಿ.ಕರೀಗೌಡ್ರ, ಮಂಜುನಾಥ ಶಾಂತಗೇರಿ,
ಕೆ.ಪಿ.ಕೋಟಿಗೌಡ್ರ, ಎಂ.ಎ.ಸಂಗನಾಳ ವಕೀಲರು,ಮಾಂತೇಶ ಬಾತಾಖಾನಿ, ಮಂಜುನಾಥ ಎಲಿಸುರ, ಜಗದೀಶತಳವಾರ, ಅಪ್ಪಣ್ಣ ಟೆಂಗಿನಕಾಯಿ, ಶರಣಪ್ಪ ತಳಕಲ,
ರಾಮಣ್ಣ ರಣತೂರ, ಪಕ್ಕೀರಪ್ಪ ಮಾದಣ್ಣವರ, ವಿನೋದಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್.ಟಿ.ಮೋರ್ಚಾ ಗದಗ ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ವಾಯ್.ಪಿ.ಅಡ್ನೂರನೆರವೇರಿಸಿದರು, ಯಲ್ಲಪ್ಪ ಶಿರಿ ವಂದಿಸಿದರು.